ಹೊಸದಿಗಂತ ವರದಿ,ಕಲಬುರಗಿ:
ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಿಂದಾಗಿ ನೀರಿನ ಒತ್ತಡ ಹೆಚ್ಚಾಗಿದ್ದರಿಂದ ನೀರಿನ ಒತ್ತಡಕ್ಕೆ ಕಲ್ಲು ಗಣಿಯ ತಡೆಗೋಡೆಯೊಂದು ಕುಸಿದು ಬಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮಲಕಾಪುರ ಗ್ರಾಮದಲ್ಲಿನ ಕಲ್ಲಿನ ಗಣಿಯ ಗೋಡೆ ನೀರಿನ ಒತ್ತಡಕ್ಕೆ ಕುಸಿದು ಬಿದ್ದಿದ್ದು,ಕಳೆದ ಕೆಲವು ದಿನಗಳಿಂದ ವ್ಯಾಪಕವಾಗಿ ಮಳೆಯಾಗಿದ್ದರಿಂದ ಕಲ್ಲು ಗಣಿಯ ತಗ್ಗು ಪ್ರದೇಶದಲ್ಲಿ ನೀರು ತುಂಬಿಕೊಂಡಿತ್ತು.
ನೀರಿನ ಒತ್ತಡಕ್ಕೆ ಬೃಹತ್ ಕಲ್ಲಿನ ಗಣಿಯ ತಡೆ ಗೋಡೆ ಕುಸಿದಿದ್ದು, ಯಾವುದೇ ರೀತಿಯ ಅನಾಹುತಗಳು ಸಂಭವಿಸಿಲ್ಲ. ಕಲ್ಲು ಗಣಿಯಲ್ಲಿ ಬ್ಲಾಕ್ ಗಳನ್ನು ನಿರ್ಮಾಣ ಮಾಡಿ, ನೀರನ್ನು ಸಂಗ್ರಹಿಸಿ ಇಡಲಾಗಿತ್ತು. ಇದೀಗ ಸಂಗ್ರಹಿಸಿದ ನೀರಿನ ಒತ್ತಡಕ್ಕೆ ಗಣಿಯ ತಡೆ ಗೋಡೆ ಕುಸಿದು ಬಿದ್ದಿದೆ.