ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಜಾಹ್ನವಿ ಕಪೂರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ದಿಢೀರ್ ಆಸ್ಪತ್ರೆ ದಾಖಲಾಗಿದ್ದಾರೆ.
ಕಳೆದೆರಡು ದಿನದಿಂದ ಜಾಹ್ನವಿ ಕಪೂರ್ ಅಸ್ವಸ್ಥಗೊಂಡಿದ್ದಾರೆ. ಆದರೆ ಇಂದು ಜಾಹ್ನವಿ ಆರೋಗ್ಯ ಮತ್ತಷ್ಟು ಕ್ಷೀಣಿಸಿದ ಕಾರಣ ತಂದೆ ಬೋನಿ ಕಪೂರ್ ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ.
ಫುಡ್ ಪಾಯ್ಸನ್ ಕಾರಣದಿಂದ ಜಾಹ್ನವಿ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಆಸ್ಪತ್ರೆ ದಾಖಲಸಲಾಗಿದೆ. ಸದ್ಯ ಜಾಹ್ನವಿ ಚೇತರಿಸಿಕೊಳ್ಳುತ್ತಿದ್ದು, ಇನ್ನೆರಡು ದಿನದಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ತಂದೆ ಬೋನಿ ಕಪೂರ್ ಹೇಳಿದ್ದಾರೆ.
ಉಲಜ್ ಚಿತ್ರದಲ್ಲಿ ಬ್ಯೂಸಿಯಾಗಿರುವ ಜಾಹ್ನವಿ ಕಪೂರ್ ಕಳೆದೆರಡು ದಿನದಿಂದ ಆಹಾರ ಸಮಸ್ಯೆಯಾಗಿದೆ. ಫುಡ್ ಪಾಯ್ಸನ್‌ನಿಂದ ಜಾಹ್ನವಿ ಆರೋಗ್ಯ ಹದಗೆಟ್ಟಿದೆ. ಎರಡು ದಿನದಿಂದ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದ ಜಾಹ್ನವಿ ಇಂದು ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದ್ದರು. ಆದರೆ ಇಂದು ಬೆಳಗ್ಗೆಯಿಂದ ಜಾಹ್ನವಿ ಸಮಸ್ಯೆ ಉಲ್ಬಣಿಸಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆ ಮೂಲಗಳ ಪ್ರಕಾರ ಜಾಹ್ನವಿ ಕಪೂರ್ ಆರೋಗ್ಯ ಸ್ಥಿರವಾಗಿದೆ. ಫುಡ್ ಪಾಯ್ಸನ್ ಕಾರಣ ಜಾಹ್ನವಿ ಬಳಲಿದ್ದಾರೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೆ. ಹೀಗಾಗಿ ಆಸ್ವಸ್ಥಗೊಂಡಿದ್ದಾರೆ. ಯಾರು ಆತಂಕ ಪಡಬೇಕಿಲ್ಲ. ಇನ್ನೆರಡು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳುತ್ತಿವೆ.