ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಘಾಟ್ ಪ್ರದೇಶದ ಹಲವಡೆ ಗುಡ್ಡ ಕುಸಿತದ ಪ್ರಕಣಗಳು ಉಂಟಾಗುತ್ತಿವೆ.ಶಿರಾಡಿ ಘಾಟ್ನಲ್ಲಿ ಗುಡ್ಡ ಕುಸಿತ ಸಂಭವಿಸಲಿದೆ ಎಂಬ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ಮೂಲಕ ಪ್ರಯಾಣವನ್ನು ನಿಷೇಧ ಮಾಡ ಹಾಸನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇತ್ತ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 278ರಲ್ಲಿ ರಾತ್ರಿ ವೇಳೆ ವಾಹನಗಳು ಸಾಗದಂತೆ ಕೊಡಗು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮಡಿಕೇರಿ ಮೂಲಕ ಸಾಗುವ ಈ ರಸ್ತೆಯೂ ಬಂದ್ ಆಗಿರುವ ಕಾರಣ ಮಂಗಳೂರು ಮತ್ತು ಬೆಂಗಳೂರು ನಡುವಿನ ಸಂಪರ್ಕ ಬಹುತೇಕ ಕಡಿತಗೊಂಡಿದೆ. ಇನ್ನು ಚಾರ್ಮಾಡಿ ಘಾಟ್ ಒಂದೇ ಉಳಿದಿದ್ದು ಅದರ ಮೇಲೆ ವಾಹನ ದಟ್ಟಣೆ ಜಾಸ್ತಿಯಾಗಲಿದೆ. ಆ ರಸ್ತೆಯಲ್ಲೂ ಅಲ್ಲಲ್ಲಿ ಗುಡ್ಡ ಕುಸಿತದ ಪ್ರಕಣಗಳು ಸಂಭವಿಸುತ್ತಿರುವುದರಿಂದ ಸಂಚಾರ ಸುರಕ್ಷಿತವಲ್ಲ.
ಶಿರಾಡಿಘಾಟ್ ನ ದೊಡ್ಡತಪ್ಪು ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿತ್ತು. ಅಲ್ಲಿ ಇನ್ನಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆಗಳಿವೆ. ಜುಲೈ 18ರಿಂದ ಅನ್ವಯವಾಗುವಂತೆ ಈ ರಸ್ತೆಯ ಮೂಲಕ ಪ್ರಯಾಣ ಮಾಡದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ರಸ್ತೆ ದುರಸ್ತಿ ಆಗುವ ತನಕ ಎಲ್ಲ ರೀತಿಯ ವಾಹನ ಸಂಚಾರ ನಿಷೇಧ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನಿರಂತರ ಮಳೆ ಸುರಿಯುತ್ತಿರುವ ಕಾರಿನ ಮತ್ತಷ್ಟು ಭೂ ಕುಸಿತದ ಉಂಟಾಗುವ ಸಾಧ್ಯತೆಗಳಿವೆ. ಮುಂಜಾಗ್ರತಾ ಕ್ರಮವಾಗಿ ಸಂಚಾರ ನಿಷೇಧಿಸಿ ಡಿಸಿ ಸಿ ಸತ್ಯಭಾಮ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನಿಂದ -ಮಂಗಳೂರಿಗೆ ತೆರಳುವ ವಾಹನಗಳು ಚಾರ್ಮಾಡಿ ಘಾಟ್ ಮೂಲಕ ಅವರ ಸೂಚನೆ ನೀಡಿದ್ದಾರೆ.