Wednesday, January 14, 2026
Wednesday, January 14, 2026
spot_img

LIFE | ನಿಮ್ಮ ಕೋಪಕ್ಕೆ ಸಂಬಂಧಗಳು ಬಲಿಯಾಗ್ತಿದೆಯಾ? ಈ ಮೂರು ವಿಧಾನ ಅನುಸರಿಸಿ

ಕೋಪ ನಿಯಂತ್ರಣಕ್ಕೆ ಬಾರದೇ ಸಂಬಂಧಗಳನ್ನೇ ಒಡೆದು ಹಾಕುತ್ತಿದ್ದೀರಾ? ನಂತರ ಯೋಚನೆ ಮಾಡಿ ಫಲವಿಲ್ಲ. ಈಗಲೇ ಕೋಪಕ್ಕೆ ಫುಲ್‌ಸ್ಟಾಪ್‌ ಹಾಕಿ. ಹೇಗೆ ಇಲ್ಲಿದೆ ಮೂರು ಪವರ್‌ಫುಲ್‌ ಟಿಪ್ಸ್‌..

ಮೊದಲನೆಯದು, ಕೋಪ ಬಂದಾಗ ಆ ಜಾಗದಿಂದ ನೀವು ಎದ್ದು ಹೋಗಿ. ಆ ಕ್ಷಣ ಎಂತದ್ದೇ ಆಗಿರಲಿ, ಯಾರು ನಿಮ್ಮನ್ನು ಎಷ್ಟೇ ಪ್ರವೋಕ್‌ ಮಾಡಿದರೂ ಮಾತುಕತೆ ಬೇಡ. ತಕ್ಷಣ ಎದ್ದುಹೋಗಿ, ಸ್ವಲ್ಪ ಸಮಯದ ನಂತರ ವಾಪಾಸ್‌ ಬನ್ನಿ, ಮಾತನಾಡಿ.

ಎರಡನೆಯದು, ಕೋಪ ಬಂದಾಗ ಏನೆಲ್ಲಾ ಹೇಳಬೇಕು ಎಂದುಕೊಂಡಿದ್ದೀರೋ ಅದನ್ನು ಹೇಳಬಿಡಿ. ಅದರ ಆಪೋಸಿಟ್‌ ಆಲೋಚನೆ ಮಾಡಿನೋಡಿ. ನೀವು ನೆಕ್ಸ್ಟ್‌ ಹೇಳುವ ಮಾತಿನಿಂದ ಎದುರಿನವರ ಪರಿಸ್ಥಿತಿ ಏನಾಗುತ್ತದೆ ಆಲೋಚಿಸಿ.

ಮೂರನೆಯದು, ಮನಸ್ಸಿನಲ್ಲಿ ಒಂದು ಎರಡು ಮೂರು ಎಂದು ಎಣಿಸುತ್ತಾ ಹೋಗಿ, ಸ್ವಲ್ಪ ಸಮಾಧಾನ ಆದ ನಂತರ ಆಲೋಚಿಸಿ ಮಾತನಾಡಿ. ಇಬ್ಬರಲ್ಲಿ ಒಬ್ಬರು ಮಾತ್ರ ಒಂದೇ ಟೈಮ್‌ಗೆ ಕೋಪ ಮಾಡಿಕೊಳ್ಳೋದು ಬೆಸ್ಟ್‌

Most Read

error: Content is protected !!