ಕೊಪ್ಪಳದಲ್ಲಿ ಹಿಟ್‌ ಆಂಡ್‌ ರನ್‌ಗೆ ಎಎಸ್‌ಐ ಬಲಿ, ತಲೆ ನಜ್ಜುಗುಜ್ಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೊಪ್ಪಳದಲ್ಲಿ ಹಿಟ್‌ ಆಂಡ್‌ ರನ್‌ಗೆ ಎಎಸ್‌ಐ ಬಲಿಯಾಗಿದ್ದಾರೆ,ಅಪಘಾತದ ತೀವ್ರತೆಗೆ ತಲೆ ನಜ್ಜುಗುಜ್ಜಾಗಿದೆ.

ಕೊಪ್ಪಳ ತಾಲೂಕಿನ ವನಬಳ್ಳಾರಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಹೈವೇ ಪೆಟ್ರೋಲಿಂಗ್ ಬಂದೋ ಬಸ್ತ್​ನಲ್ಲಿ ಇರುವಾಗ ಅಪರಿಚಿತ ವಾಹನವೊಂದು ಗುದ್ದಿಕೊಂಡು ಹೋಗಿದೆ.

ಮುನಿರಾಬಾದ್ ಪೊಲೀಸ್ ಠಾಣೆಯ ಎಎಸ್​ಐ ರಾಮಣ್ಣ (54) ಸಾವನ್ನಪ್ಪಿದವರು. ವನಬಳ್ಳಾರಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಎಸ್​ಐ ಹೈವೇನಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಅಪರಿಚಿತ ವಾಹನವೊಂದು ಅಧಿಕಾರಿಗೆ ಗುದ್ದಿಕೊಂಡು ಹೋಗಿದೆ. ಹೀಗಾಗಿ ಸ್ಥಳದಲ್ಲೇ ಅಧಿಕಾರಿ ಮೃತಪಟ್ಟಿದ್ದಾರೆ. ವಾಹನ ಗುದ್ದಿದ ರಭಸಕ್ಕೆ ಅಧಿಕಾರಿಯ ತಲೆ ನಜ್ಜುಗುಜ್ಜಾಗಿದ್ದು ಗುರುತು ಸಿಗಂತೆ ಆಗಿದೆ.

ಇಂದು ಬೆಳಗ್ಗೆ ಸರಿ ಸುಮಾರು 3:00 ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಘಟನಾ ಸ್ಥಳಕ್ಕೆ ಎಸ್​ಪಿ ರಾಮ್.ಎಲ್ ಅರೆಸಿದ್ದಿ ಹಾಗೂ ಸಿಪಿಐ ಸುರೇಶ್ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳದ ಸುತ್ತುಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!