ಕೆಲವೊಮ್ಮೆ ಮನೆಯಲ್ಲಿ ಮಹಿಳೆಯರು ಮಾಡುವ ಕೆಲ ತಪ್ಪುಗಳು ಗಂಡನ ಜೇಬನ್ನು ಖಾಲಿ ಮಾಡುತ್ತವಂತೆ, ಜತೆಗೆ ಮನೆಗೆ ದಾರಿದ್ರ್ಯ ಸುತ್ತಿಕೊಂಡು, ಲಕ್ಷ್ಮಿ ಮನೆಯ ಒಳಗೆ ಬರೋದಿಲ್ಲವಂತೆ, ಯಾವ ತಪ್ಪುಗಳಿವು ನೋಡಿ..
ತಡವಾಗಿ ಏಳೋದು, ಮನೆಯ ಕೆಲಸಗಳನ್ನು ಮಾಡದೇ ಇರುವುದು, ಹಾಸಿಗೆ ಮಡಚದೇ ಇರುವುದು.
ಗಂಡ-ಹೆಂಡತಿ ನಡುವೆ ಜಗಳ, ಕೆಟ್ಟ ಮಾತು, ಮನೆಯಲ್ಲಿ ಕಲಹ ಇದ್ದರೆ ಆ ಮನೆಗೆ ಲಕ್ಷ್ಮೀ ಬರುವುದಿಲ್ಲ.
ಮನೆಯಲ್ಲಿ ಮಹಿಳೆಯರು ಅಗತ್ಯಕ್ಕಿಂತ ಹೆಚ್ಚು ಊಟ ಮಾಡುವುದು ಗಂಡನ ಜೇಬು ಖಾಲಿ ಮಾಡುತ್ತದೆ.
ಮನೆಯಲ್ಲಿ ಪಾತ್ರೆ, ಕಸ, ನೆಲ ಎಲ್ಲವೂ ಮಾಡಬೇಕು, ಗಲೀಜಾದ ಮನೆಯಲ್ಲಿ ದುಡ್ಡು ಉಳಿಯುವುದಿಲ್ಲ.
ರಾತ್ರಿ ಎಂಜಲು ಪಾತ್ರೆಗಳನ್ನು ಹಾಗೇ ಬಿಟ್ಟು ಬರುವುದು, ನಿನ್ನೆ ರಾತ್ರಿಯ ಪಾತ್ರೆಗಳನ್ನು ಬೆಳಗ್ಗೆ ತೊಳೆಯುವುದು ಕೆಟ್ಟ ಅಭ್ಯಾಸ. ಇದನ್ನು ಬಿಟ್ಟುಬಿಡಿ.
ಇವೆಲ್ಲವೂ ಕೆಲವರ ನಂಬಿಕೆಯಾಗಿದೆ. ಕೆಲವರು ಯಾವ ಕೆಲಸಗಳನ್ನೂ ಮಾಡದೇ, ತಡವಾಗಿ ಎದ್ದರೂ ಕೈತುಂಬಾ ಹಣ ಪಡೆಯುತ್ತಿರುತ್ತಾರೆ. ಎಲ್ಲವೂ ತಮ್ಮ ತಮ್ಮ ನಂಬಿಕೆಗಳಿಗೆ ಬಿಟ್ಟಿದ್ದಾಗಿದೆ.