ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆ ವಿಚಾರವಾಗಿ ಸಹೋದರರ ನಡುವಿನ ಜಗಳದಿಂದ ಆರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದ ಎಲೆಕ್ಯಾತನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಹಿಳೆಯೊಂದಿಗಿನ ಸಂಬಂಧದ ವಿಚಾರವಾಗಿ ಆತನ ಮತ್ತು ಆತನ ಸಹೋದರನ ನಡುವೆ ಜಗಳ ನಡೆದಿದೆ. ನವೀನ್ ತನ್ನ ಚಿಕ್ಕಪ್ಪನ ಮಗ ನಾಗೇಶ್ (28) ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಇದೀಗ ಕೊಲೆ ಆರೋಪಿ ನವೀನ್ ನನ್ನುದಾಬಸ್ ಪೇಟೆ ಪೊಲೀಸರು ಬಂಧಿಸಿದ್ದಾರೆ.