ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆಯ ಕಲಾಪದವೇಳೆ ಗದ್ದಲ ಮಾಡಿದ ಬಿಜೆಪಿ ಶಾಸಕರಿಗೆ ಇದೇನು ನಿಮ್ಹಾನ್ಸಾ ಅಥವಾ ವಿಧಾನಸಭೆನಾ? ಅಂತ ಸ್ಪೀಕರ್ ಯು.ಟಿ ಖಾದರ್ ಗರಂ ಆಗಿದ್ದಾರೆ.
ವಿಧಾನಸಭೆಯಲ್ಲಿ ಗದ್ದಲದ ನಡುವೆಯೇ ಮಳೆಹಾನಿ ಚರ್ಚೆಗೆ ಸ್ಪೀಕರ್ ಅವಕಾಶ ಕೊಟ್ಟರು. ಈ ವೇಳೆ ಶಾಸಕ ಪೊನ್ನಣ್ಣ ಚರ್ಚೆ ಆರಂಭಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕರು ಚಪ್ಪಾಳೆ ತಟ್ಟಿ ಘೋಷಣೆ ಕೂಗಿದರು. ಅಲ್ಲದೇ `ಏನಿಲ್ಲ ಏನಿಲ್ಲ ಮಳೆಗಾಲಕ್ಕೆ ಪರಿಹಾರ ಏನಿಲ್ಲ, ಅನುದಾನ ಬರಲ್ಲ’ ಅಂತ ಪ್ರತಿಪಕ್ಷದ ಸದಸ್ಯರು ಹಾಡು ಹೇಳಿ ಗದ್ದಲ ಎಬ್ಬಿಸಿದರು. ಈ ವೇಳೆ ಇದು ಯಾವ ನಾಟಕದ ಕಂಪನಿ? ಅಂತ ಸ್ಪೀಕರ್ ಸಿಡಿಮಿಡಿಗೊಂಡರು.