Wednesday, January 14, 2026
Wednesday, January 14, 2026
spot_img

ಡಿವೋರ್ಸ್‌ ಆದರೂ ಜಗಳ ನಿಂತಿಲ್ಲ! ಬೀದಿಗೆ ಬಿತ್ತು ಬಾಕ್ಸರ್‌ ಮೇರಿ ಕೋಮ್‌ ಪರ್ಸನಲ್‌ ಲೈಫ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಕ್ಸಿಂಗ್‌ ದಿಗ್ಗಜೆ ಮೇರಿ ಕೋಮ್‌ ಮತ್ತು ಮಾಜಿ ಪತಿ ಕರುಂಗ್‌ ಒನ್ಲರ್‌ ನಡುವಿನ ಕಿತ್ತಾಟ ಬೀದಿಗೆ ಬಿದ್ದಿದೆ. ಡಿವೋರ್ಸ್‌ ಆದ ನಂತರವೂ ಇಬ್ಬರ ಮಧ್ಯೆ ಜಗಳವಾಗುತ್ತಿದ್ದು, ಇದೀಗ ಪತ್ನಿ ಮೇರಿ ಕೋಮ್‌ಗೆ ಇಬ್ಬರು ಪುರುಷರ ಜತೆ ಅಕ್ರಮ ಸಂಬಂಧವಿತ್ತು ಎಂದು ಮಾಜಿ ಪತಿ ಆರೋಪಿಸಿದ್ದಾರೆ.

ಕರುಂಗ್‌ ತಮ್ಮ ಕೋಟಿ ಕೋಟಿ ಆಸ್ತಿ ಲಪಟಾಯಿಸಿದ್ದಾರೆ ಎಂದು ಮೇರಿ ಆರೋಪಿಸಿದ್ರೆ, ಆಕೆಗೆ ಅನೈತಿಕ ಸಂಬಂಧವಿತ್ತು ಎಂದು ಒನ್ಲರ್‌ ದೂರಿದ್ದಾರೆ. ಇಬ್ಬರು 2023ರಲ್ಲಿ ದೂರವಾಗಿದ್ದು, ಈಗ ಬಹಿರಂಗವಾಗಿಯೇ ಕಿತ್ತಾಡುತ್ತಿದ್ದಾರೆ.

ಒನ್ಲರ್‌ ನನ್ನ ಹೆಸರಲ್ಲಿ ಸಾಲ ಪಡೆಯುತ್ತಿದ್ದರು. ನನ್ನ ಆಸ್ತಿಯನ್ನೆಲ್ಲ ಅವರ ಹೆಸರಿಗೆ ವರ್ಗಾಯಿಸಿಕೊಂಡು, ಅದನ್ನು ಅಡವಿಟ್ಟು ಸಾಲ ಪಡೆದಿದ್ದರು. ರೌಡಿಗಳನ್ನು ಬಿಟ್ಟು ನನ್ನಿಂದ ಭೂಮಿ ಬರೆಸಿಕೊಂಡಿದ್ದರು ಮೇರಿ ಕೋಮ್ ಇತ್ತೀಚೆಗೆ ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಒನ್ಲರ್‌, ‘2013ರಿಂದಲೂ ಆಕೆ ಅನೈತಿಕ ಸಂಬಂಧ ಹೊಂದಿದ್ದಳು. ಮೊದಲು ಜೂನಿಯರ್‌ ಬಾಕ್ಸರ್‌. ಇದಾದ ಬಳಿಕ 2017ರಲ್ಲಿ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಜತೆ ಸಂಬಂಧ ಇಟ್ಟುಕೊಂಡಿದ್ದಳು. ಇದಕ್ಕೆಲ್ಲ ನನ್ನ ಬಳಿ ಪುರಾವೆಯಿದೆ. ಆದರೂ ಇಷ್ಟು ದಿನ ನಾನು ಮೌನವಾಗಿದ್ದೆ’ ಎಂದಿದ್ದಾರೆ.

ಮೇರಿ ಕೋಮ್ ರಮ್ ಹಾಗೂ ವೋಡ್ಕಾದಂತಹ ಆಲ್ಕೋಹಾಲ್ ಕುಡಿಯುತ್ತಾರೆ. ಆಕೆಗೆ ಗುಟ್ಕಾ ತಿನ್ನುವ ಅಭ್ಯಾಸವೂ ಇದೆ. ಇಂತಹ ವಿಚಾರಗಳನ್ನು ನಾನೂ ಎಲ್ಲೂ ಮಾಧ್ಯಮಗಳಲ್ಲಿ ಇದುವರೆಗೂ ಹೇಳಿಲ್ಲ ಎಂದು ಅವರ ಮಾಜಿ ಪತಿ ಒನ್ಲರ್ ಹೇಳಿದ್ದಾರೆ.

Most Read

error: Content is protected !!