ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮೆಟ್ರೋ ರೈಲು ನಿಗಮ ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಉತ್ತೇಜಿಸಲು ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಈವರೆಗೆ ಸ್ಮಾರ್ಟ್ ಕಾರ್ಡ್‌ಗಳಿಗೆ ಮಾತ್ರ ಸೀಮಿತವಾಗಿದ್ದ ‘ಪಿರಿಯಾಡಿಕಲ್ ಪಾಸ್’ ಸೌಲಭ್ಯವನ್ನು ಈಗ ಮೊಬೈಲ್ ಕ್ಯೂಆರ್ ರೂಪದಲ್ಲಿ ಪರಿಚಯಿಸಲಾಗಿದೆ.
ಜೂನ್ 15, ಗುರುವಾರದಿಂದ ಈ ಹೊಸ ಸೇವೆ ‘ನಮ್ಮ ಮೆಟ್ರೋ’ ಆ್ಯಪ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಹೊಸ ಪಾಸ್‌ಗಳ ವೈಶಿಷ್ಟ್ಯವೇನು?
ಸ್ಮಾರ್ಟ್ ಕಾರ್ಡ್ ಪಾಸ್‌ಗಳಿಗೆ ಪಾವತಿಸಬೇಕಿದ್ದ 50 ರೂ. ಭದ್ರತಾ ಠೇವಣಿಯ ಅಗತ್ಯ ಈ ಕ್ಯೂಆರ್ ಪಾಸ್‌ಗಳಿಗೆ ಇಲ್ಲ.ಆ್ಯಪ್ ಮೂಲಕ ಪಾಸ್ ಖರೀದಿಸಿ, ನಿಲ್ದಾಣದ AFC ಗೇಟ್‌ಗಳಲ್ಲಿ ಕ್ಯೂಆರ್ ಸ್ಕ್ಯಾನ್ ಮಾಡಿ ಸುಲಭವಾಗಿ ಪ್ರಯಾಣಿಸಬಹುದು. ಸ್ಮಾರ್ಟ್ ಕಾರ್ಡ್ ಪಾಸ್‌ಗಳಿಗೆ ಹೋಲಿಸಿದರೆ ಕ್ಯೂಆರ್ ಪಾಸ್‌ಗಳ ದರ ತುಸು ಕಡಿಮೆ ಇದೆ.
ಈ ಮೊಬೈಲ್ ಪಾಸ್‌ಗಳ ಬಳಕೆಯಿಂದ ಟಿಕೆಟ್ ಕೌಂಟರ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ. ಸಮಯ ಉಳಿತಾಯದ ಜೊತೆಗೆ ಸಂಪರ್ಕರಹಿತ ಪ್ರಯಾಣದ ಅನುಭವ ಸಿಗಲಿದೆ. ಸದ್ಯಕ್ಕೆ ತನ್ನ ಅಧಿಕೃತ ಆ್ಯಪ್‌ನಲ್ಲಿ ಮಾತ್ರ ಈ ಸೌಲಭ್ಯ ನೀಡುತ್ತಿರುವ BMRCL, ಶೀಘ್ರದಲ್ಲೇ ಇತರೆ ಟಿಕೆಟಿಂಗ್ ಪ್ಲಾಟ್‌ಫಾರ್ಮ್‌ಗಳಿಗೂ ಈ ಸೇವೆಯನ್ನು ವಿಸ್ತರಿಸುವ ಗುರಿ ಹೊಂದಿದೆ.


