ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರನ್ನು “ಔರಂಗಜೇಬ್ ಅಭಿಮಾನಿಗಳ ಸಂಘದ ನಾಯಕ” ಎಂದು ಕರೆದಿದ್ದಾರೆ.
“ಈ ಔರಂಗಜೇಬ್ ಅಭಿಮಾನಿಗಳ ಸಂಘವು ದೇಶದ ಭದ್ರತೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ. ಯಾರು ಈ ಔರಂಗಜೇಬ್ ಅಭಿಮಾನಿಗಳ ಸಂಘ ನಾಯಕ? ಅದು ಅಘಾಡಿ ಮತ್ತು ಉದ್ಧವ್ ಠಾಕ್ರೆ ಅವರು ಔರಂಗಜೇಬ್ ಅಭಿಮಾನಿಗಳ ಸಂಘದ ನಾಯಕರಾಗಿದ್ದಾರೆ. ತನ್ನನ್ನು ಬಾಳಾಸಾಹೇಬರ ವಾರಸುದಾರ ಎಂದು ಕರೆದುಕೊಳ್ಳುವ ಉದ್ಧವ್ ಠಾಕ್ರೆ, ಕಸಬ್‌ಗೆ ಬಿರಿಯಾನಿ ತಿನ್ನಿಸಿದವರ ಜೊತೆ ನೀವು ಕುಳಿತಿದ್ದೀರಿ ಎಂದು ಅಮಿತ್ ಶಾ ಪುಣೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದರು.
“ಉದ್ಧವ್ ಠಾಕ್ರೆ ಪಿಎಫ್‌ಐ ಅನ್ನು ಬೆಂಬಲಿಸುವವರ ಮಡಿಲಲ್ಲಿ ಕುಳಿತಿದ್ದಾರೆ…ಯಾಕೂಬ್ ಮೆಮನ್‌ನನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದವರ ಜೊತೆ ನೀವು ಕುಳಿತಿದ್ದೀರಿ. ಉದ್ಧವ್ ಜೀ, ನೀವು ಝಾಕಿರ್ ನಾಯ್ಕ್ ಅವರನ್ನು ‘ಶಾಂತಿಯ ಸಂದೇಶವಾಹಕ’ ಎಂದು ಕರೆದವರ ಮಡಿಲಲ್ಲಿ ಕುಳಿತಿದ್ದೀರಿ” ಎಂದು ಕಿಡಿಕಾರಿದ್ದಾರೆ.