Wednesday, January 14, 2026
Wednesday, January 14, 2026
spot_img

CINE | ಬಾಲಿವುಡ್‌ಗೆ ಸೀರಿಯಸ್‌ನೆಸ್‌ ಬರೋದು ಯಾವಾಗ? ಮತ್ತೆ ಕಾಂತಾರ ಸಿನಿಮಾಕ್ಕೆ ಅಪಮಾನ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂತಾರ ಚಾಪ್ಟರ್‌ ಒನ್‌ನ ಯಶಸ್ಸಿನ ನಂತರ ಇಡೀ ವಿಶ್ವವೇ ದೈವಕ್ಕೆ ತಲೆಬಾಗಿದೆ. ನಟ, ನಿರ್ದೇಶಕ ರಿಷಭ್‌ ಶೆಟ್ಟಿಯ ಅಭಿನಯಕ್ಕೆ ಎಲ್ಲರೂ ಮನಸೋತಿದ್ದಾರೆ. ಆದರೆ ಬಾಲಿವುಡ್‌ನಿಂದ ಮಾತ್ರ ಸಿನಿಮಾ ಹಾಗೂ ದೈವಕ್ಕೆ ಗೊತ್ತೋ ಗೊತ್ತಿಲ್ಲದೆಯೋ ಅಪಮಾನ ಆಗುತ್ತಿದೆ.

ಈ ಹಿಂದೆ ಅವಾರ್ಡ್‌ ಶೋ ಒಂದರಲ್ಲಿ ನಟ ರಣ್‌ವೀರ್‌ ಸಿಂಗ್‌ ದೈವಕ್ಕೆ ದೆವ್ವ ಎಂದು ಹೇಳಿದ್ದಲ್ಲದೆ ಕೆಟ್ಟ ರೀತಿಯಲ್ಲಿ ದೈವವನ್ನು ಅಣಕಿಸಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಮಾನಕರ ಘಟನೆ ನಡೆದಿದೆ.

‘ರಾಹು-ಕೇತು’ ಹೆಸರಿನ ಹಿಂದಿ ಹಾಸ್ಯ ಪ್ರಧಾನ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾನಲ್ಲಿ ‘ಕಾಂತಾರ’ ಸಿನಿಮಾದ ಕೂಗು ಮತ್ತು ಸಿನಿಮಾದ ರೆಫೆರೆನ್ಸ್​​ಗಳನ್ನು ಸಹ ಬಳಸಲಾಗಿತ್ತು. ಆದರೆ ಸೆನ್ಸಾರ್ ಮಂಡಳಿ ಆ ಎರಡಕ್ಕೂ ಕತ್ತರಿ ಹಾಕಿದೆ.

ಇಬ್ಬರು ಪೆದ್ದ ಯುವಕರ ಕತೆ ‘ರಾಹು-ಕೇತು’ ಆಗಿದ್ದು, ಸಿನಿಮಾನಲ್ಲಿ ಹಾಸ್ಯಕ್ಕಾಗಿ ‘ಕಾಂತಾರ’ ಸಿನಿಮಾದ ರೆಫೆರನ್ಸ್ ಅನ್ನು ಹಾಗೂ ದೈವದ ಕೂಗನ್ನು ಬಳಸಲಾಗಿತ್ತಂತೆ. ಆದರೆ ಅದರಿಂದ ಭಕ್ತರ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಂದು ಆ ದೃಶ್ಯವನ್ನು ತೆಗೆದಿದೆ.

ರಿಷಬ್ ಶೆಟ್ಟಿ, ಹೊಂಬಾಳೆ ಫಿಲಮ್ಸ್ ಮತ್ತು ‘ಕಾಂತಾರ’ ಸಿನಿಮಾ ತಂಡಕ್ಕೆ ಸೇರಿದ ಹಲವರು ಹಲವು ಬಾರಿ ಈ ಬಗ್ಗೆ ಹೇಳಿದ್ದಾರೆ. ದೈವದ ಅನುಕರಣೆ ಮಾಡುವುದು, ದೈವವನ್ನು ಹಾಸ್ಯಕ್ಕೆ ಬಳಸಿಕೊಳ್ಳುವುದು ಬೇಡ ಎಂದು ಆದರೂ ಸಹ ಪದೇ ಪದೇ ಕೆಲವರು ಕಮರ್ಶಿಯಲ್ ಕಾರಣಗಳಿಗೆ, ಹಾಸ್ಯಕ್ಕೆ ದೈವದ ಅನುಕರಣೆ ಮಾಡುತ್ತಲೇ ಇದ್ದಾರೆ. ಇದೀಗ ಸೆನ್ಸಾರ್ ಮಂಡಳಿ ಸಮಯೋಚಿತವಾಗಿ ಬಾಲಿವುಡ್ ಸಿನಿಮಾದಿಂದ ‘ಕಾಂತಾರ’ ಸಿನಿಮಾದ ರೆಫೆರೆನ್ಸ್ ಅನ್ನು ತೆಗೆದು ಹಾಕಿದೆ.

Most Read

error: Content is protected !!