October 10, 2026
Saturday, October 10, 2026
spot_img

CINE 🎥 | ಸಂಗೀತ ಶಾಸ್ತ್ರದ ಫೋಟೊಸ್‌ ಅಪ್‌ಲೋಡ್‌ ಮಾಡಿದ ರಶ್ಮಿಕಾ-ವಿಜಯ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆಯ ಫೋಟೋಸ್‌ ಇಂಟರ್ನೆಟ್‌ನಲ್ಲಿ ಹಲ್‌ಚಲ್‌ ಎಬ್ಬಿಸಿತ್ತು. ಇದಾದ ನಂತರವೇ ರಿಸೆಪ್ಷನ್‌ ಫೋಟೊಗಳನ್ನು ರಶ್ಮಿಕಾ ಅಪ್‌ಲೋಡ್‌ ಮಾಡಿದ್ದು, ಜನ ಸೂಪರ್‌ ಎಂದಿದ್ದರು.

ನಿಧಾನಕ್ಕೆ ಇಬ್ಬರೂ ಮೆಹೆಂದಿ ಪ್ರೋಗ್ರಾಮ್‌ನ ಫೋಟೊಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಈ ಬಾರಿ ಕೂಡ ಟ್ರಡೀಷನ್‌ ಜೊತೆಗೆ ಫ್ಯಾಷನ್‌ ಮಿಕ್ಸ್‌ ಆಗಿದ್ದು, ರಶ್ಮಿಕಾ ಹಾಗೂ ವಿಜಯ್‌ ಅದ್ಭುತವಾಗಿ ಕಾಣಿಸಿದ್ದಾರೆ.

ಪ್ರತೀ ಸಮಾರಂಭದಲ್ಲಿಯೂ ವಿಜಯ್‌ ದೇವರಕೊಂಡ ಬಟ್ಟೆಗಳಿಗೆ, ಸ್ಟೈಲ್‌ಗೆ ಹೆಚ್ಚು ಶ್ಲಾಘನೆ ಸಿಕ್ಕಿದ್ದು, ಬ್ರೈಡ್‌ಗಿಂತ ಗ್ರೂಮ್‌ ಸೂಪರ್‌ ಆಗಿ ಕಾಣ್ತಿದ್ದಾರೆ ಎಂದು ಹೇಳಲಾಗ್ತಿದೆ.

ಮೂರು ನಾಲ್ಕು ಬಣ್ಣಗಳ ಕಸ್ಟಮ್‌ ಔಟ್‌ಫಿಟ್‌ ಧರಿಸಿದ್ದು, ಪಂಚೆಯನ್ನು ರೀ ಡಿಸೈನ್‌ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮತ್ತೆ ರಶ್ಮಿಕಾ ವಿಜಯ್‌ ಬಗ್ಗೆ ಮಾತುಕತೆ ಆರಂಭವಾಗಿದೆ.

Must Read