ಹೊಸದಿಗಂತ ಡಿಜಿಟಲ್ ಡೆಸ್ಕ್:
ತರುಣ್ ಸುಧೀರ್ ಕೊನೆಗೂ ಸಿಹಿಸುದ್ದಿ ಕೊಟ್ಟಿದ್ದಾರೆ. ತನ್ನಿಷ್ಟದ ಗೆಳತಿಯನ್ನು ವಿವಾಹವಾಗುವ ವಿಚಾರವನ್ನ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆ ಮೂಲಕ ಗಾಸಿಪ್ಸ್ಗೆ ಬ್ರೇಕ್ ಹಾಕಿದ್ದಾರೆ.
ತರುಣ್ ಸುಧೀರ್ ಮತ್ತು ಸೋನಲ್ ಮದುವೆಯಾಗುತ್ತಿರುವ ವಿಚಾರವನ್ನು ಅಧಿಕೃತಗೊಳಿಸಿದ್ದಾರೆ. ವಿವಾಹಕ್ಕೆ ದಿನಾಂಕ ಫಿಕ್ಸ್ ಆಗಿದ್ದು, ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸ್ಪೆಷಲ್ ವಿಡಿಯೋ ಮೂಲಕ ತರುಣ್ ಹಾಗೂ ಸೋನಲ್ ಮದುವೆಯ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಸಿನಿಮಾ ಥಿಯೇಟರ್ನ ದೃಶ್ಯವನ್ನು ಹಂಚಿಕೊಳ್ಳುವ ಮೂಲಕ ಮದುವೆಯ ದಿನಾಂಕವನ್ನು ಘೋಷಿಸಿದ್ದಾರೆ. ಆ ಮೂಲಕ ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ಮತ್ತು ಬ್ಯೂಟಿಫುಲ್ ಹೀರೋಯಿನ್ ತಾವಿಬ್ಬರು ಒಂದಾಗುವ ಬಗ್ಗೆ ಹೇಳಿದ್ದಾರೆ.
View this post on Instagram