ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದಲ್ಲಿ ಭದ್ರತಾಪಡೆಗಳ ವಿರುದ್ಧ ಜನರ ಮನಸ್ಸಲ್ಲಿ ರಾಷ್ಟ್ರ ವಿರೋಧಿ ಕೃತ್ಯಗಳಿಗೆ ಪ್ರೇರೇಪಿಸುವಂಥ ವಿಡಿಯೋವೊಂದನ್ನು ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿದೆ.
ಈ ವಿಡಿಯೋವನ್ನು ಯಾರಿಗೂ ಕಳುಹಿಸದಂತೆ, ಹಂಚದಂತೆ ಜಮ್ಮು ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ವಿಡಿಯೋವನ್ನು ಶೇರ್ ಮಾಡಿದರೆ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅನ್ವಯ ದೂರು ದಾಖಲಿಸುವ ಕುರಿತು ಎಚ್ಚರಿಸಿದ್ದಾರೆ.
ಜೈಶ್ ಉಗ್ರರು ಬಿಡುಗಡೆಗೊಳಿಸಿರುವ ವಿಡಿಯೋ 55 ಸೆಕೆಂಡ್ನದ್ದಾಗಿದ್ದು, ಬಾಲಿವುಡ್ ಸಿನಿಮಾ ಫ್ಯಾಂಟಮ್ನ ಪೋಸ್ಟರ್ ಅನ್ನು ಅಳವಡಿಸಿಕೊಂಡು ವಿಡಿಯೋ ಹರಿಬಿಡಲಾಗಿದೆ. ಅದರಲ್ಲಿ ಸೂಕ್ಷ್ಮ ಮನಸ್ಸಿಗರನ್ನು ದೇಶ ವಿರೋಧಿ ಕೃತ್ಯಕ್ಕೆ ಸೆಳೆಯುವ ಅಂಶಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.