ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಬಜೆಟ್ ಮಂಡನೆಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ 3.0 ಸರ್ಕಾರ ಚೊಚ್ಚಲ ಬಜೆಟ್ ಇದಾಗಿರುವುದರಿಂದ ಆತ್ಮವಿಶ್ವಾಸದ ಹೆಜ್ಜೆ ಮತ್ತು ಹೊಸ ಭರವಸೆಯ ಹಾದಿ ತುಳಿಯುವ ನಿರೀಕ್ಷೆ ಹೆಚ್ಚಿದೆ.
ಪ್ರಧಾನಿ ನರೇಂದ್ರ ಮೋದಿ ಅವರ 3.0 ಸರ್ಕಾರ ಚೊಚ್ಚಲ ಬಜೆಟ್ ಸಂಬಂಧಿಸಿದಂತೆ ಸಾಕಷ್ಟು ನಿರೀಕ್ಷೆಗಳ ಜೊತೆ ಜೊತೆಗೆ ಸಾಕಷ್ಟು ಸವಾಲುಗಳು ಸಹ ಎದುರಾಗಿದೆ. ಜುಲೈ 23ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ನಲ್ಲಿ ಯುವಜನರ ಶಕ್ತಿ ಸಂಚಯಕ್ಕೆ ಪೂರಕವಾಗುವ ಯೋಜನೆಗಳ ನಿರೀಕ್ಷೆ ಇದೆ. ಈ ಬಾರಿ ಮೋದಿ ಬಜೆಟ್ ನಲ್ಲಿ ಯುವಕರಿಗೆ ಇನ್ನಷ್ಟು ಶಕ್ತಿಯಾಗಿ ಹಾಗೂ ನಿರುದ್ಯೋಗ ಸಮಸ್ಯೆಯನ್ನು ದೂರು ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗುವ ನಿರೀಕ್ಷೆ ಇದೆ.