ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿಚ್ಚ ಸುದೀಪ್ ಕುಟುಂಬದ ಇಬ್ಬರು ಕುಡಿಗಳು ಒಟ್ಟಾಗಿ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಒಂದೆಡೆ ಸುದೀಪ್ ಅಳಿಯ ಸಂಚಿತ್ ಸಂಜೀವ್ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದರೆ, ಮತ್ತೊಂದೆಡೆ ಸುದೀಪ್ ಪುತ್ರಿ ಸಾನ್ವಿ ತಮ್ಮ ಗಾಯನದ ಮೂಲಕ ಕನ್ನಡಿಗರ ಮನಗೆಲ್ಲುತ್ತಿದ್ದಾರೆ.
ಸಂಚಿತ್ ಸಂಜೀವ್ ನಟನೆಯ ಚೊಚ್ಚಲ ಸಿನಿಮಾ ‘ಮ್ಯಾಂಗೋ ಪಚ್ಚ’ ಬಿಡುಗಡೆಗೆ ಸಜ್ಜಾಗಿದೆ. ವಿವೇಕ್ ನಿರ್ದೇಶನದ ಈ ಚಿತ್ರವನ್ನು ಪ್ರಿಯಾ ಹಾಗೂ ಕೆಆರ್ಜಿ ಸ್ಟುಡಿಯೋ ನಿರ್ಮಿಸಿದೆ. ಚಿತ್ರದ ಕೆಲಸಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ.
ಈ ಚಿತ್ರದ ಹೈಲೈಟ್ ಎಂದರೆ ಇತ್ತೀಚೆಗೆ ಬಿಡುಗಡೆಯಾದ ‘ಅರಗಿಣಿಯೇ..’ ಎನ್ನುವ ಮೆಲೋಡಿ ಹಾಡು. ಈ ಹಾಡನ್ನು ಸುದೀಪ್ ಪುತ್ರಿ ಸಾನ್ವಿ ಸುದೀಪ್ ಹಾಡಿದ್ದಾರೆ. ಈ ಹಿಂದೆ ‘ಮ್ಯಾಕ್ಸ್’ ಚಿತ್ರದ ‘ಮಸ್ತ್ ಮಲೈಕಾ’ ಹಾಡಿನ ಮೂಲಕ ಗಮನ ಸೆಳೆದಿದ್ದ ಸಾನ್ವಿ, ಈಗ ಮತ್ತೊಮ್ಮೆ ತನ್ನ ಮಧುರ ಧ್ವನಿಯಿಂದ ಮೋಡಿ ಮಾಡಿದ್ದಾರೆ.


