February 10, 2026
Tuesday, February 10, 2026
spot_img

ಆಂಧ್ರದಲ್ಲಿ ಸಂಕ್ರಾಂತಿ ಸಂಭ್ರಮ, ಕೋಳಿ ಕಾಳಗಕ್ಕೆ ಅಖಾಡ ರೆಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಂಕ್ರಾಂತಿ ಸಂಭ್ರಮ ಹಿನ್ನೆಲೆ ಬಾಪಟ್ಲ, ರೇಪಲ್ಲೆ ಮತ್ತು ವೇಮೂರಿನಲ್ಲಿ ಕೋಳಿ ಕಾಳಗ ಆಯೋಜಿಸಲು ಸಂಘಟಕರು ಸಿದ್ಧತೆ ನಡೆಸಿದ್ದಾರೆ. ಪಿಟ್ಟಲವಾನಿಪಾಲೆಂ ಮಂಡಲದ ಮಂಟೇನವರಿಪಾಲೆಂನಲ್ಲಿ ಸ್ಥಳೀಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಬೃಹತ್ ಕೋಳಿ ಕಾಳಗಕ್ಕೆ ಸಕಲ ಸಿದ್ಧತೆ ನಡೆದಿದೆ.

ಸಾವಿರಾರು ಮಂದಿ ಕೋಳಿ ಕಾಳಗ ವೀಕ್ಷಿಸಲು ವೇದಿಕೆಗಳು ಮತ್ತು ಟೆಂಟ್​ಗಳನ್ನು ನಿರ್ಮಿಸಲಾಗಿದೆ. ವಿವಿಐಪಿಗಳು ಮತ್ತು ವಿಐಪಿಗಳಿಗಾಗಿ ವಿಶೇಷ ಗ್ಯಾಲರಿಗಳನ್ನು ಸಿದ್ಧಪಡಿಸಲಾಗಿದೆ. ಚೆರುಕುಪಲ್ಲಿ ಮಂಡಲದ ತೂರ್ಪುಪಾಲೆಂನಲ್ಲಿ ದೊಡ್ಡ ಅಖಾಡ ನಿರ್ಮಿಸಲಾಗಿದೆ. ಅಖಾಡಕ್ಕಿಳಿಯುವ ಹುಂಜಕ್ಕೆ 50 ಸಾವಿರದಿಂದ 1 ಲಕ್ಷದವರೆಗೂ ಬೆಲೆ ಇದೆ.

ಹೈದರಾಬಾದ್, ಚೆನ್ನೈ, ವಿಶಾಖಪಟ್ಟಣಂ, ವಿಜಯವಾಡ, ಗುಂಟೂರು, ಓಂಗೋಲ್ ಮತ್ತು ನೆಲ್ಲೂರಿನಿಂದ ಬೆಟ್ಟಿಂಗ್ ಮಾಡುವವರು​ ಆಗಮಿಸಿದ್ದಾರೆ. ಸ್ಪರ್ಧೆಯು ಭೋಗಿಯೊಂದಿಗೆ ಪ್ರಾರಂಭವಾಗಲಿದ್ದು, ಸಂಕ್ರಾಂತಿಯಿಂದ ಕನುಮಾದವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಇದಕ್ಕಾಗಿ ಫ್ಲಡ್‌ಲೈಟ್‌ಗಳನ್ನು ಮತ್ತು ಜನರೇಟರ್‌ಗಳನ್ನು ಅಳವಡಿಸಲಾಗಿದೆ. ಕೋಳಿ ಕಾಳಗದ ಜೊತೆಗೆ, ಜೂಜಾಟ, ಗುಂಡಾಟ, ಮಟ್ಕಾ ಮತ್ತು ಇತರ ಜೂಜಾಟದ ಆಟಗಳನ್ನು ಆಯೋಜಿಸಲು ವ್ಯವಸ್ಥೆ ಮಾಡಲಾಗಿದೆ.

ಹೆಚ್ಚು ಆಟಗಳನ್ನು ಗೆಲ್ಲುವ ಕೋಳಿಗಳ ಮಾಲೀಕರಿಗೆ ಬಹುಮಾನವಾಗಿ ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನು ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಮದ್ಯ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ. ವೇಮುರು, ಚಾವಲಿ, ಕೊಲ್ಲೂರು, ಅನಂತವರಂ, ಪಲ್ಲೆಕೋಣ ಮತ್ತು ಚುಂಡೂರಿನಲ್ಲಿ ಬಾರ್‌ಗಳನ್ನು ಸ್ಥಾಪಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !