ಹೊಸದಿಗಂತ ಡಿಜಿಟಲ್ ಡೆಸ್ಕ್:
SAMCO ಸೆಕ್ಯುರಿಟೀಸ್‌ನ ಸಂಶೋಧನಾ ವಿಶ್ಲೇಷಕ ರಾಜ್ ಗಾಯ್ಕರ್ ಮಾತನಾಡಿ, “ಹಣಕಾಸು ಸಚಿವರು ಮುದ್ರಾ ಸಾಲದ ಮಿತಿಯನ್ನು ₹ 10 ಲಕ್ಷದಿಂದ ₹ 20 ಲಕ್ಷಕ್ಕೆ ವಿಸ್ತರಿಸಿದ್ದಾರೆ. ಮುದ್ರಾ ಸಾಲಗಳನ್ನು ಪಿಎಸ್‌ಯು ಬ್ಯಾಂಕ್‌ಗಳು, ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿ ಮೂಲಕ ವಿತರಿಸಲಾಗುತ್ತದೆ, ಆದ್ದರಿಂದ ಮಿತಿ ವಿಸ್ತರಣೆಯ ಘೋಷಣೆಯು ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳಂತಹ ಕಂಪನಿಗಳಿಗೆ ಪ್ರಯೋಜನವನ್ನು ನೀಡುತ್ತದೆ” ಎಂದು ತಿಳಿಸಿದ್ದಾರೆ.