ಸಿದ್ದರಾಮಯ್ಯ ಎಲ್ಲಾ ಜಿಲ್ಲೆಗಳಿಗೆ ಸರಿಸಮನಾಗಿ ಹಣ ಹಂಚಿಕೆ‌ ಮಾಡಿದ್ದಾರಾ?: ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಬಜೆಟ್​ನಲ್ಲಿ ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಆಂಧ್ರ ಪ್ರದೇಶ, ಬಿಹಾರ್​ಗೆ ಮಾತ್ರ ಈ ಬಜೆಟ್ ಸೀಮಿತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಅಸಮಾದಾನ ಹೊರಹಾಕಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ,ಆಂಧ್ರ, ಬಿಹಾರಕ್ಕೆ ಹೆಚ್ಚು ನೆರವು ಕೊಟ್ಟಿದ್ದಾರೆ ಎಂದು ವಿಪಕ್ಷಗಳು ಟೀಕೆ ಮಾಡುತ್ತಿವೆ. ಹೆಚ್ಚು ಅಭಿವೃದ್ಧಿಗೆ ಒತ್ತು ನೀಡುವುದಕ್ಕೆ‌ ಕಾರಣವೇನು? ರಾಜ್ಯ ಇಬ್ಬಾಗವಾದಗ ಆಂಧ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಘೋಷಣೆ ಮಾಡಿದ್ದೇ ಕಾಂಗ್ರೆಸ್ ಆದರೆ ಜಾರಿಗೆ ತಂದಿರಲಿಲ್ಲ. ಈಗ ಪ್ರಧಾನಿ ಮೋದಿಯವರು ಜಾರಿಗೆ ತಂದಿದ್ದಾರೆ. ನಮ್ಮ ರಾಜ್ಯದ ಯೋಜನೆಗಳು ಯಾವುದು ಇಲ್ಲ ಎನ್ನುವ ಆರೋಪವಿದೆ. ಈ ರೀತಿಯ ಟೀಕೆ ಮಾಡುವುದು ಸಹಜ. ಬಜೆಟ್ ಮಂಡನೆ ವೇಳೆ ಹೆಸರು ಹೇಳದೆ ಇದ್ದರೂ ಸಹ ರಾಜ್ಯಗಳಿಗೆ ಹಣ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ಕನ್ನಡನಾಡಿನ ಜನತೆಗೆ ನಾನು ಮನವಿ ಮಾಡುತ್ತೇನೆ. ಕಾಂಗ್ರೆಸ್ ನವರು ಮೊದಲು ಟೀಕೆ ಮಾಡುವುದನ್ನು ನಿಲ್ಲಿಸಬೇಕು. ನಾವು ಕರ್ನಾಟಕಕ್ಕೆ ಹೋದಲು ಯಾಕೆ ಬಂದ್ರಿ ಅಂತಾರೆ. ಈಗ ರಾಜ್ಯಕ್ಕೆ ಏನು ತಂದರು ಎಂದು ಕೇಳುತ್ತಾರೆ. ಪ್ರಧಾನಿಯವರನ್ನು ಭೇಟಿಯಾಗಿ ರಾಜ್ಯಕ್ಕೆ ಯೋಜನೆಗಳನ್ನು ತರಲು ನಾನು ಶ್ರಮಿಸುತ್ತೇನೆ. ಒಂದು ತಿಂಗಳಲ್ಲೇ ಎಲ್ಲವನ್ನು ತಂದು ಇಳಿಸಲು ಸಾಧ್ಯವಿಲ್ಲ. ಯೋಜನೆಗಳನ್ನು ತರುತ್ತೇವೆ ಎಂದು ಭರವಸೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ರಾಜ್ಯಗಳಿಗೆ ಅನುದಾನ ಹಂಚಿಕೆಗೆ ಮಾರ್ಗಸೂಚಿ ಇರುತ್ತವೆ. ಸಿದ್ದರಾಮಯ್ಯನವರು ಎಲ್ಲಾ ಜಿಲ್ಲೆಗಳಿಗೆ ಸರಿಸಮನಾಗಿ ಹಣ ಹಂಚಿಕೆ‌ ಮಾಡಿದ್ದಾರಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕೆಲವು ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ಕೊಡುವುದು ನಡೆದುಕೊಂಡು ಬಂದಿದೆ. ಕಲ್ಯಾಣ ಕರ್ನಾಟಕಕ್ಕೆ ಯಾಕೆ ವಿಶೇಷ ಪ್ಯಾಕೇಜ್ ಕೊಡುವುದಕ್ಕೆ ಬಂತು. ಈಶಾನ್ಯ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ಕೊಡುತ್ತಾರೆ. ದೇವೇಗೌಡರು ಈಶಾನ್ಯ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ನೀಡಿದ್ದರು. ಹಾಸನಕ್ಕೆ ಐಐಟಿ ಬಗ್ಗೆ ಬೇಡಿಕೆ ಇದೆ/ ರಾಯಚೂರಿನ ಜನರು ಏಮ್ಸ್ ಕೇಳುತ್ತಿದ್ದಾರೆ. ಬಜೆಟ್ ನಲ್ಲಿ ಘೋಷಣೆ ಮಾಡದೆ ಇದ್ದರೂ ಕೊಡಬಾರದು ಎಂದೇನಿಲ್ಲ. ಕುರ್ಚಿ ಉಳಿಸಿಕೊಳ್ಳುವುದು ಎಷ್ಟು ಮುಖ್ಯವೋ ಹಿಂದುಳಿದ ರಾಜ್ಯಗಳಿಗೆ ಹಣಕಾಸು ಸಹಾಯ ಮಾಡುವುದು ಅಷ್ಟೇ ಮುಖ್ಯ ಎಂದರು.

ವಿಕಸಿತ ಭಾರತ ಪ್ರಧಾನಿ ಮೋದಿ ಚಿಂತನೆಯಾಗಿದೆ. 2047ಕ್ಕೆ ಅಮೃತಕಾಲದ ದೂರದೃಷ್ಟಿಯ ಬಜೆಟ್ ಇದಾಗಿದೆ. ಕೌಶಲ್ಯ ತರಬೇತಿ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದಾರೆ. 4.10ಕೋಟಿ ಉದ್ಯೋಗ ಸೃಷ್ಟಿಗೆ ಯೋಜನೆ ರೂಪಿಸಿದ್ದಾರೆ. MSMS ಗಳಿಗೆ ಆರ್ಥಿಕ ಶಕ್ತಿ ತುಂಬುವುದು ಮೋದಿ ಕಲ್ಪನೆ. ನಗರ ಮತ್ತು ಗ್ರಾಮಗಳಲ್ಲಿ ಮನೆ ನಿರ್ಮಾಣಕ್ಕೆ ಹೆಚ್ಚು ಹಣ ನೀಡಿದ್ದಾರೆ. ಕೃಷಿ ವಲಯಕ್ಕೆ ಈ ಬಾರಿ ಹೆಚ್ಚು ಆದ್ಯತೆ ನೀಡಿದ್ದಾರೆ. ಸಂಶೋಧನಾ ಕೇಂದ್ರಗಳನ್ನು ತೆರೆಯುವ ಉದ್ದೇಶವನ್ನು ಸರಕಾರ ಹೊಂದಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಹಾಗಾದರೆ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಒಪ್ಪಿಕೊಂಡದ್ದಕ್ಕೆ ಧನ್ಯವಾದಗಳು.ಅದನ್ನು ಸರಿಪಡಿಸಲು ಕೋರಿ ಮೊದಲು.
    ಇನ್ನು ಆಗಿನ ಕಾಂಗ್ರೆಸ್ಸ ಕೇಂದ್ರ ಸರ್ಕಾರ ಒಳ್ಳೆಯ ಆಡಳಿತ ನಡೆಸಲು ಆಂಧ್ರ ವಿಭಜನೆ ಮಾಡಿದ ನಂತರ ಹತ್ತು ವರ್ಷಗಳ ಕಾಲ ಮೋದಿಜಿಯವರೇ ಅಧಿಕಾರದಲ್ಲಿದ್ದು ನೆರವು ನೀಡಬಹುದಿತ್ತು.
    ಸಣ್ಣ ಹುಡುಗರಿಗೂ ರಾಜಕಾರಣ ಅರ್ಥವಾಗುತ್ತೆ ಆಂಧ್ರ ಮತ್ತು ಬಿಹಾರಕ್ಕೆ ಏಕೆ ಹೆಚ್ಚಿನ ನೆರವು ಎಂದು.

LEAVE A REPLY

Please enter your comment!
Please enter your name here

error: Content is protected !!