ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಪ್ರೀಂ ಕೋರ್ಟ್ನಲ್ಲಿ ನೀಟ್-ಯುಜಿ ಕುರಿತ ಅರ್ಜಿಗಳ ವಿಚಾರಣೆಯ ವೇಳೆ ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ ಅವರು ಹಿರಿಯ ವಕೀಲ ಮ್ಯಾಥ್ಯೂಸ್ ನೆಡುಂಪರಾ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಅರ್ಜಿದಾರರಲ್ಲಿ ಒಬ್ಬರನ್ನು ಪ್ರತಿನಿಧಿಸುತ್ತಿದ್ದ ಹಿರಿಯ ವಕೀಲರಾದ ನರೇಂದ್ರ ಹೂಡಾ ಅವರು ತಮ್ಮ ವಾದಗಳನ್ನು ಮಂಡಿಸುತ್ತಿದ್ದಾಗ ನೆಡುಂಪರಾ ಮಧ್ಯ ಪ್ರವೇಶಿಸಿದ್ದಕ್ಕೆ ಸಿಟ್ಟಾದ
ಡಿವೈ ಚಂದ್ರಚೂಡ್ ಅವರು ಭದ್ರತಾ ಸಿಬ್ಬಂದಿಯನ್ನು ಕರೆದು ಕೋರ್ಟ್ನಿಂದ ಹೊರಕ್ಕೆ ಹಾಕುವೆ ಎಂದು ಎಚ್ಚರಿಕೆ ನೀಡಿದರು.
ಹೂಡಾ ಅವರು ತಮ್ಮ ವಾದ ಮಾಡುತ್ತಿರುವ ನಡುವೆಯೇ ಮಧ್ಯಪ್ರವೇಶಿಸಿದ ನೆಡುಂಪರಾ ನನಗೂ ಮಂಡಿಸುವುದಕ್ಕೆ ಒಂದು ವಿಷಯವಿದೆ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ,ಅವರು (ಹೂಡಾ) ವಾದಿಸುತ್ತಿದ್ದಾರೆ. ನೀವು ಅವನಿಗೆ ಅಡ್ಡಿಪಡಿಸಬಾರದು ಎಂದು ಹೇಳಿದರು. ಇದಕ್ಕೆ ನೆಡಂಪೆರಾ ಅವರು, ನಾನು ನ್ಯಾಯಾಲಯದಲ್ಲಿ ಅತ್ಯಂತ ಹಿರಿಯ ವಕೀಲ ಎಂದಿದ್ದಾರೆ.. ಅವರ ಮಾತು ಸಿಜೆಐ ಅವರನ್ನು ಕೆರಳಿಸಿತು. ನೆಡುಂಪರಾಗೆ ತಕ್ಷಣವೇ ಎಚ್ಚರಿಕೆ ನೀಡಿದರು.
ನಾನು ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆ. ನೀವು ಕೋರ್ಟ್ನ ಗ್ಯಾಲರಿ ಜತೆ ಮಾತನಾಡುತ್ತಿಲ್ಲ. ನೀವು ನನ್ನ ಮಾತನ್ನು ಕೇಳಬೇಕು. ನಾನು ಈ ನ್ಯಾಯಾಲಯದ ಉಸ್ತುವಾರಿ. ತಕ್ಷಣವೇ ಸೆಕ್ಯೂರಿಟಿಯನ್ನು ಕರೆದು ನಿಮ್ಮ ಹೊರ ಹಾಕಬೇಕಾಗುತ್ತದೆ ಎಂದು ಹೇಳಿದರು. ಈ ವೇಳೆ ನೆಡುಂಪರಾ, ಇದನ್ನು ನೀವು ಹೇಳುವ ಅಗತ್ಯವಿಲ್ಲ ಹೇಳಿ ಹೊರಡಲು ಅನುವಾದರು.
ಈ ವೇಳೆ ಮುಖ್ಯ ನ್ಯಾಯಮೂರ್ತಿ, ನೀವು ಅದನ್ನು ಹೇಳಬೇಕಾಗಿಲ್ಲ. ನೀವಿನ್ನು ಹೋಗಬಹುದು. ನಾನು ಕಳೆದ 24 ವರ್ಷಗಳಿಂದ ನ್ಯಾಯಾಂಗ ವ್ಯವಸ್ಥೆಯನ್ನು ನೋಡಿದ್ದೇನೆ. ಈ ನ್ಯಾಯಾಲಯದಲ್ಲಿ ವಕೀಲರ ಕಾರ್ಯವಿಧಾನವನ್ನು ನನಗೆ ನಿರ್ದೇಶಿಸಲು ನಾನು ಅನುಮತಿ ಕೊಡುವುದಿಲ್ಲ ಎಂದು ಹೇಳಿದರು. ಈ ವೇಳೆ ನೆಡುಂಪರಾ ಈ ನ್ಯಾಯಾಲಯವನ್ನು 1979 ರಿಂದ ನೋಡಿದ್ದೇನೆ ಎಂದು ಹೇಳಿದರು.ಈ ವೇಳೆ ಮುಖ್ಯ ನ್ಯಾಯಮೂರ್ತಿ ನೆಡುಂಪರಾ ಅವರಿಗೆ ‘ದಯವಿಟ್ಟು ಸುಮ್ಮನಿರಿ. ಅಥವಾ ಕುಳಿತುಕೊಳ್ಳಿ. ನೀವು ಹೊರಡಲು ಬಯಸುತ್ತೀರಿ ಎಂದಾದರೆ ಹೋಗಬಹುದು. ಅದು ನಿಮ್ಮ ಆಯ್ಕೆ. ನೀವು ವಿಚಾರಣೆ ಮಧ್ಯಪ್ರವೇಶಿಸಬೇಕಾಗಿಲ್ಲ’ ಎಂದು ಸಿಜೆಐ ಹೇಳಿದರು.
ಬಳಿಕ ಮ್ಯಾಥ್ಯೂಸ್ ನೆಡುಂಪರಾ, ನಾನು ಒಂದು ವಾಕ್ಯವನ್ನು ಹೇಳುವ ಮೂಲಕ ಮುಕ್ತಾಯಗೊಳಿಸುತ್ತೇನೆ. ನನಗೆ ಮಾಡಿದ ಎಲ್ಲಾ ಅವಮಾನಕ್ಕಾಗಿ ನಾನು ನ್ಯಾಯಾಂಗದ ಪ್ರಭುತ್ವವನ್ನು ಕ್ಷಮಿಸುತ್ತಿದ್ದೇನೆ. ಏಕೆಂದರೆ ಅವರು ಏನು ಮಾಡುತ್ತಿದ್ದಾರೆಂದು ನಿಮಗೆ ತಿಳಿದಿಲ್ಲ. ನನ್ನ ಮನಸ್ಸಿನಲ್ಲಿ ಏನೂ ಇಲ್ಲ, ಪ್ರಭುತ್ವದ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಹೇಳಿ ಹೊರಟರು.
It is most unfortunate to see such incident happend in the top house of Juciary. We will be seeing this type of incidents happen often in Assemblies, Councils and even in Parliament