January14, 2026
Wednesday, January 14, 2026
spot_img

SHOCKING | ಪ್ರಾಣಿಗಳಂತೆ ಮನುಷ್ಯರನ್ನು ಬೇಟೆಯಾಡಿ ತಿನ್ನುತ್ತಿದ್ದ ನರಭಕ್ಷಕ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಶ್ಚಿಮ ಬಂಗಾಳದಲ್ಲಿ ಮನುಷ್ಯರನ್ನು ಕೊಂದು ತಿನ್ನುವ ನರಭಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.

ಆರೋಪಿ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿ ನಂತರ ಅವನ ಮಾಂಸವನ್ನು ತಿನ್ನಲು ದೇಹವನ್ನು ಮನೆಗೆ ಎಳೆದುಕೊಂಡು ಹೋಗುತ್ತಿದ್ದ ಎಂದು ದಿನ್ಹಾಟಾ ಉಪಜಿಲ್ಲಾ ಪೊಲೀಸ್ ಅಧಿಕಾರಿ ಧಿಮಾನ್ ಮಿತ್ರ ಮಾಹಿತಿ ನೀಡಿದ್ದಾರೆ.

ಜನವರಿ 10 ರಂದು, ದಿನ್ಹಾಟಾ ಗಡಿಗೆ ಹೊಂದಿಕೊಂಡಿರುವ ಕುರ್ಷಾ ಹ್ಯಾಟ್‌ನಲ್ಲಿರುವ ದೂರದ ಸ್ಮಶಾನದಿಂದ ಪೊಲೀಸರು ಮಾನಸಿಕ ಅಸ್ವಸ್ಥ ವ್ಯಕ್ತಿಯ ಶವವನ್ನು ವಶಪಡಿಸಿಕೊಂಡಿದ್ದಾರೆ. ಮೃತದೇಹದ ಕುತ್ತಿಗೆ ಮತ್ತು ಭುಜಗಳ ಮೇಲೆ ಆಳವಾದ ಗಾಯಗಳಿದ್ದವು. ಅದರ ನಂತರ, ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಅದರ ನಂತರ, ಆರೋಪಿ ಫಿರ್ದೌಸ್ ಆಲಂನನ್ನು ಬಂಧಿಸಲಾಯಿತು.

ಅದಾದ ನಂತರ, ಆರೋಪಿಯನ್ನು ವಿಚಾರಣೆ ನಡೆಸಿದಾಗ, ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಕೊಲೆಯ ನಂತರ ಆ ವ್ಯಕ್ತಿಯನ್ನು ತನ್ನ ಮನೆಗೆ ಕರೆತರುತ್ತಿದ್ದ. ನಂತರ ಅವನು ದೇಹವನ್ನು ಸ್ವಚ್ಛಗೊಳಿಸುತ್ತಿದ್ದ. ಆರೋಪಿಯು ಮೃತ ದೇಹದ ಮಾಂಸವನ್ನು ತಿನ್ನುವ ಉದ್ದೇಶ ಹೊಂದಿದ್ದ ಎಂಬುದನ್ನು ತಿಳಿದು ಪೊಲೀಸರಿಗೂ ಆಘಾತವಾಗಿತ್ತು.

ಪೊಲೀಸರು ಈಗಾಗಲೇ ಆರೋಪಿಯನ್ನು ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ಕೊಲೆಗೆ ಕಾರಣ ತಿಳಿದುಬಂದಿಲ್ಲ, ನಾವು ಅವನನ್ನು ಬಂಧಿಸಿದ್ದೇವೆ, ಆರೋಪಿಯು ತಾನು ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಮಾಂಸ ತಿನ್ನುವುದಕ್ಕಾಗಿಯೇ ಕೊಲೆ ಮಾಡಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Most Read

error: Content is protected !!