ಬೇಕಾಗುವ ಸಾಮಗ್ರಿ:
1 ಚಮಚ ಎಣ್ಣೆ, 1 ಚಮಚ ಜೀರಿಗೆ, 5 ಎಸಳು ಬೆಳ್ಳುಳ್ಳಿ, 1 ಈರುಳ್ಳಿ, 2 ಟೊಮೆಟೊ, ಒಂದು ಮೂಲಂಗಿ, ಉಪ್ಪು, ಕಾಳುಮೆಣಸಿನ ಪುಡಿ.
ಮಾಡುವ ವಿಧಾನ:
ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ. ಜೀರಿಗೆ ಹುರಿದ ನಂತರ ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಹುರಿಯಿರಿ. ನಂತರ ಈರುಳ್ಳಿ ಸೇರಿಸಿ. ಈರುಳ್ಳಿ ತಿಳಿ ಗುಲಾಬಿ ಬಣ್ಣಕ್ಕೆ ತಿರುಗಿದ ನಂತರ, ಟೊಮೆಟೊ ಸೇರಿಸಿ ಮತ್ತು ಫ್ರೈ ಮಾಡಿ. ಟೊಮೆಟೊ ಪೇಸ್ಟ್‌ಗೆ ಸ್ವಲ್ಪ ಮೂಲಂಗಿ ಸೇರಿಸಿ, ಸ್ವಲ್ಪ ನೀರು ಸೇರಿಸಿ ಮತ್ತು 5 ನಿಮಿಷ ಬೇಯಿಸಿ.
ನಂತರ ಬಾಣಲೆಯನ್ನು ಕೆಳಕ್ಕಿಳಿಸಿ 10 ನಿಮಿಷ ತಣ್ಣಗಾಗಲು ಬಿಡಿ. ತಣ್ಣಗಾಗುತ್ತಿದ್ದಂತೆ ಮಿಕ್ಸಿಗೆ ಹಾಕಿ ಗ್ರೆಂಡ್ ಮಾಡಿಕೊಳ್ಳಿ. ನಂತರ ಮತ್ತದೇ ಬಾಣಲೆಗೆ ಹಾಕಿ ಬೇಕಾದಷ್ಟು ನೀರು, ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಬೆರೆಸಿ ಕುದಿಸಿ. ಬಿಸಿ ಬಿಸಿ ಸೂಪ್ ಸವಿಯಲು ಸಿದ್ದ.