ಯಲ್ಲಾಪುರದ ಮಾಳಕೊಪ್ಪ ಶಾಲೆಯ ಬಳಿ ಬೈಕ್ ಮೇಲೆ ಮರ ಬಿದ್ದು ಸವಾರ ಸಾವು

ದಿಗಂತ ವರದಿ ಯಲ್ಲಾಪುರ ;

ತಾಲೂಕಿನ ಮಂಚಿಕೇರಿಯ ಹಾಸಣಗಿ ಪಂಚಾಯತಿ ವ್ಯಾಪ್ತಿಯ ಮಾಳಕೊಪ್ಪ ಶಾಲೆಯ ಬಳಿ ರಭಸವಾಗಿ ಬಿಸಿದ ಗಾಳಿ ಮಳೆಗೆ ಮರವೊಂದು ಬೈಕ್ ಸವಾರನ ಮೇಲೆ ಬಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

ಕಬ್ಬಿನಗದ್ದೆ ಯ 25 ವರ್ಷದ ಯುವಕ ವಿನಯ ಮಂಜುನಾಥ ಗಾಡೀಗ ಮೃತಪಟ್ಟ ದುರ್ದೈ ವಿ ಯಾಗಿದ್ದಾನೆ.ಘಟನಾ ಸ್ಥಳಕ್ಕೆ ತಹಶೀಲ್ದಾರ ಅಶೋಕ ಭಟ್ಟ, ಪೊಲೀಸ್ ನಿರೀಕ್ಷಕರಾದ ರಮೇಶ ಹಾನಾಪುರ, ಪಿಎಸ್‌ಐ ಸಿದ್ದಪ್ಪ ಗುಡಿ, ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲಿಸಿದರು.

ವಿನಯ ಮಂಜುನಾಥ ಗಾಡೀಗ ನ ಮೃತ ದೇಹ ತಾಲೂಕ ಆಸ್ಪತ್ರೆ ಯಲ್ಲಿ ಇಡಲಾಗಿದ್ದು .ಶಿರಸಿ ಉಪವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಭೇಟಿ ನೀಡಿ ಮೃತನ ಸಂಬಂಧಿಕರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರವನ್ನು ತ್ವರಿತ ವಾಗಿ ಕೊಡಿಸುವದಕ್ಕೆ ಕ್ರಮ ಕೈಗೊಳ್ಳುವದಾಗಿ ಭರವಸೆಯನ್ನು ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!