ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ ಐಸ್ ಕ್ರೀಂನಲ್ಲಿ ವ್ಯಕ್ತಿಯ ಕೈಬೆರಳು ಪತ್ತೆಯಾಗಿತ್ತು. ಇದೀಗ ಮಧ್ಯಪ್ರದೇಶದ ಖಾರ್ಗೋನ್‍ನಲ್ಲಿ ಚಾಕೊಲೇಟ್‍ನಲ್ಲಿ ಕೃತಕ ಹಲ್ಲುಗಳು ಪತ್ತೆಯಾಗಿವೆ.
ಹೌದು, ನಿವೃತ್ತ ಶಾಲಾ ಪ್ರಾಂಶುಪಾಲರಾದ ಮಾಯಾದೇವಿ ಗುಪ್ತಾ ಅವರು ತಿನ್ನುತ್ತಿದ್ದ ಚಾಕೊಲೇಟ್‍ನಲ್ಲಿ ನಾಲ್ಕು ಹಲ್ಲುಗಳು ಕಂಡುಬಂದಿದೆ. ವರದಿ ಪ್ರಕಾರ, ಸರ್ಕಾರೇತರ ಸಂಸ್ಥೆಯ ಸ್ವಯಂಸೇವಕಿ ಮಾಯಾದೇವಿ ಗುಪ್ತಾ ಅವರು ಮಗುವಿನ ಜನ್ಮದಿನದಂದು ಚಾಕೊಲೇಟ್ ಸ್ವೀಕರಿಸಿದರು. ಕೆಲವು ದಿನಗಳ ನಂತರ ಅವರು ಚಾಕೊಲೇಟ್ ತಿನ್ನುವಾಗ ಹಲ್ಲಿಗೆ ಗಟ್ಟಿಯಾದ ವಸ್ತು ಸಿಕ್ಕಿದೆ. ಕೊನೆಗೆ ನೋಡಿದಾಗ ಅದು ಹಲ್ಲಿನ ಸೆಟ್ ಆಗಿತ್ತು.
‘ಅದು ಜನಪ್ರಿಯ ಬ್ರಾಂಡ್‍ನ ಕಾಫಿ ಫ್ಲೇವರ್ ಚಾಕೊಲೇಟ್ ಆಗಿತ್ತು. ಚಾಕೊಲೇಟ್ ತಿಂದ ನಂತರ, ಬಾಯಿಗೆ ಯಾವುದೋ ಕುರುಕಲು ಸಿಕ್ಕಿದ ಹಾಗೆ ಆಯಿತು. ನಾನು ಅದನ್ನು ಮತ್ತೆ ಜಗಿಯಲು ಪ್ರಯತ್ನಿಸಿದಾಗ, ಅದು ತುಂಬಾ ಗಟ್ಟಿಯಾಗಿತ್ತು. ನಾನು ಅದನ್ನು ಹೊರತೆಗೆದು ನೋಡಿದಾಗ, ಅದು ನಾಲ್ಕು ಕೃತಕ ಹಲ್ಲುಗಳಾಗಿದ್ದವು. ಅದನ್ನು ನೋಡಿ ನನಗೆ ಶಾಕ್ ಆಗಿದೆ’ ಎಂದು ಗುಪ್ತಾ ಹೇಳಿದ್ದಾರೆ.
ಘಟನೆಯ ನಂತರ, ಅವರು ಈ ವಿಷಯವನ್ನು ಖಾರ್ಗೋನ್‍ನ ಜಿಲ್ಲಾ ಆಹಾರ ಮತ್ತು ಔಷಧ ಇಲಾಖೆಗೆ ವರದಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಧಿಕಾರಿ ಎಚ್.ಎಲ್.ಅವಾಸಿಯಾ ಹೇಳಿದ್ದಾರೆ. ಈ ವಿಷಯವನ್ನು ಪರಿಶೀಲಿಸಲು ತಂಡವನ್ನು ನಿಯೋಜಿಸಲಾಗಿದೆ ಮತ್ತು ಚಾಕೊಲೇಟ್‍ಗಳನ್ನು ಖರೀದಿಸಿದ ಅಂಗಡಿಯಿಂದ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲು ಸಂಗ್ರಹಿಸಲಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.
ಜೂನ್‍ನಲ್ಲಿ ಮುಂಬೈನ ವೈದ್ಯರೊಬ್ಬರು ತಮ್ಮ ಸಹೋದರಿ ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ್ದ ಐಸ್ ಕ್ರೀಮ್ ಕೋನ್‍ನಲ್ಲಿ ಮಾನವ ಬೆರಳನ್ನು ಪತ್ತೆಯಾಗಿತ್ತು. ಬೆರಳನ್ನು ಕಂಡುಹಿಡಿದ ವೈದ್ಯರು ಇನ್ಸ್ಟಾಗ್ರಾಮ್ ಮೂಲಕ ಐಸ್ ಕ್ರೀಮ್ ಕಂಪನಿಗೆ ದೂರು ನೀಡಿ ಪೊಲೀಸ್ ದೂರು ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆ ವಸ್ತು ನಿಜವಾಗಿಯೂ ಮಾನವ ಬೆರಳು ಎಂದು ದೃಢಪಡಿಸಿತು. ಹೆಚ್ಚಿನ ತನಿಖೆಯಲ್ಲಿ ಬೆರಳು ಐಸ್ ಕ್ರೀಮ್ ಕಂಪನಿಯಲ್ಲಿ ಕೆಲಸ ಮಾಡುವ ಸಹಾಯಕ ಆಪರೇಟರ್ ಮ್ಯಾನೇಜರ್ ಗೆ ಸೇರಿದ್ದು ಎಂದು ತಿಳಿದುಬಂದಿತ್ತು.