ಬಾಲಿವುಡ್ ಕಿಂಗ್ ಖಾನ್‌ ಗೆ ಸಿಕ್ಕಿತು ವಿಶೇಷ ಗೌರವ: ಪ್ಯಾರಿಸ್​ನಲ್ಲಿ ಬಂಗಾರದ ನಾಣ್ಯದ ಮೇಲೆ ಶಾರುಖ್​ ​ ಹೆಸರು, ಚಿತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಾದ್ಯಂತ ಬಾಲಿವುಡ್​ ನಟ ಶಾರುಖ್ ಖಾನ್​ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಫ್ರಾನ್ಸ್​ ರಾಜಧಾನಿ ಪ್ಯಾರಿಸ್ ನಲ್ಲಿ ವಿಶೇಷ ಗೌರವವನ್ನು ನೀಡಲಾಗಿದೆ.

ಫ್ರಾನ್ಸ್​ ರಾಜಧಾನಿ ಪ್ಯಾರಿಸ್​ನ ಗ್ರೇವಿನ್​ ಮ್ಯೂಸಿಯಂನಲ್ಲಿ ಹೊಸ ಬಂಗಾರದ ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ. ಅದರ ಮೇಲೆ ಶಾರುಖ್​ ಖಾನ್ ಅವರು ಚಿತ್ರ ಮತ್ತು ಹೆಸರು ಮುದ್ರಿಸಲಾಗಿದೆ.

ಈ ಬಂಗಾರದ ನಾಣ್ಯದ ಫೋಟೋವನ್ನುಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Image

ಪ್ರಸಿದ್ಧ ಗ್ರೆವಿನ್​ ಸಂಗ್ರಹಾಲಯದಲ್ಲಿ ಅನೇಕ ಸೆಲೆಬ್ರಿಟಿಗಳ ಮೇಣದ ಪ್ರತಿಮೆ ಇದೆ. ಶಾರುಖ್​ ಖಾನ್​ ಅವರ ಮೇಣದ ಪ್ರತಿಮೆ ಕೂಡ ಇಲ್ಲಿದೆ. ಅದರ ಜೊತೆಗೆ ಬಂಗಾರದ ನಾಣ್ಯವನ್ನು ಕೂಡ ಬಿಡುಗಡೆ ಮಾಡುವ ಮೂಲಕ ಶಾರುಖ್​ ಖಾನ್​ಗೆ ಗೌರವ ಸಲ್ಲಿಸಲಾಗಿದೆ. ಈ ಗೌರವ ಪಡೆದ ಭಾರತದ ಮೊದಲ ನಟ ಎಂಬ ಖ್ಯಾತಿಗೆ ಶಾರುಖ್​ ಖಾನ್ ಪಾತ್ರರಾಗಿದ್ದಾರೆ. ಅಲ್ಲದೇ, ಮಹಾತ್ಮ ಗಾಂಧಿ ಬಳಿಕ ಈ ಗೌರವ ಪಡೆದ ಎರಡನೇ ಭಾರತೀಯ ಎಂಬುದು ಕೂಡ ಶಾರುಖ್​ ಖಾನ್​ ಹೆಗ್ಗಳಿಕೆ.

ಚಿತ್ರರಂಗದಲ್ಲಿ ಮೂರು ದಶಕಗಳಿಗೂ ಅಧಿಕ ಅನುಭವ ಹೊಂದಿರುವ ಶಾರುಖ್​ ಖಾನ್​ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಕೂಡ ಅವರು ಪಡೆದುಕೊಂಡಿದ್ದಾರೆ. ಇಂದಿಗೂ ಅವರಿಗೆ ಬೇಡಿಕೆ ಇದೆ. ಅವರನ್ನು ನೋಡಲು ಮುಂಬೈನ ನಿವಾಸದ ಎದುರ ವಿದೇಶಿ ಪ್ರಜೆಗಳು ಕೂಡ ಬರುತ್ತಾರೆ ಎಂಬುದು ಗಮನಾರ್ಹ ಸಂಗತಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!