ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ಜೈಲಿನ ಮೇಲೆ ಪೊಲೀಸರು ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಂಜಾ ಹಾಗೂ ಡ್ರಗ್ಸ್ ಪತ್ತೆಯಾಗಿದೆ. ಸೆಲ್ ಫೋನ್ಗಳು ಮತ್ತು ಗ್ಯಾಜೆಟ್ಗಳು ಸಹ ಪತ್ತೆಯಾಗಿವೆ.
ಮಂಗಳೂರು ಕಾರಾಗೃಹದ ಮೇಲೆ ಮಂಗಳೂರು ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಅಲ್ಲಿ ನಡೆಯುತ್ತಿರುವ ಅಕ್ರಮ ಬಯಲಾಗಿದೆ.
ದಾಳಿ ವೇಳೆ ಪೊಲೀಸರು 25 ಮೊಬೈಲ್ ಫೋನ್ ಗಳು, ಬ್ಲೂಟೂತ್ ಸಾಧನ, ಐದು ಹೆಡ್ ಫೋನ್ ಗಳು, ಯುಎಸ್ ಬಿ ಡ್ರೈವ್ , ಐದು ಚಾರ್ಜರ್ ಗಳು ಹಾಗೂ ಕತ್ತರಿಗಳನ್ನು ಪತ್ತೆ ಹಚ್ಚಿ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜತೆಗೆ ಕೈದಿಗಳ ಬಳಿಯಿದ್ದ ಗಾಂಜಾ ಹಾಗೂ ಡ್ರಗ್ಸ್ಗಳನ್ನು ಜಪ್ತಿ ಮಾಡಲಾಗಿದೆ. ಬೆಳಗಿನ ಜಾವ ನಾಲ್ಕು ಗಂಟೆಗೆ 150ಕ್ಕೂ ಹೆಚ್ಚು ಪೊಲೀಸರು ಏಕಕಾಲದಲ್ಲಿ ಜೈಲಿನ ಮೇಲೆ ದಾಳಿ ನಡೆಸಿದರು. ಡ್ರಗ್ಸ್ ಮತ್ತು ಗಾಂಜಾ ಪತ್ತೆಯಾಗಿರುವ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತನಿಖೆಗೆ ಆದೇಶಿಸಿದ್ದಾರೆ.