ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ರಾಷ್ಟ್ರಪತಿ ಭವನದ ಆವರಣದಲ್ಲಿರುವ ʼಮೊಘಲ್ ಗಾರ್ಡನ್ʼ ಅನ್ನು ʼಅಮೃತ ಉದ್ಯಾನʼ ಎಂದು ಮರು ನಾಮಕರಣದ ಬೆನ್ನಲ್ಲೇ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ಮತ್ತು ಅಶೋಕ ಹಾಲ್ ಗೆ ಮರುನಾಮಕರಣ ಮಾಡಲಾಗಿದೆ.
ದರ್ಬಾರ್ ಹಾಲ್‌ಗೆ ಗಣತಂತ್ರ ಮಂಟಪ ಮತ್ತು ಅಶೋಕ್ ಹಾಲ್‌ಗೆ ಅಶೋಕ ಮಂಟಪ ಎಂದು ಮರುನಾಮಕರಣ ಮಾಡಲಾಗಿದೆ.
ಇದೀಗ ಮರುನಾಮಕರಣಕ್ಕೆ ಪ್ರತಿಪಕ್ಷಗಳು ಆಕ್ರೋಶ ಹೊರ ಹಾಕಿವೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿದ್ದು, ಇದು ದರ್ಬಾರ್ʼನ ವಿಚಾರವಲ್ಲ. ಇದು ಶೆಹನ್‌ಶಾನ ಪರಿಕಲ್ಪನೆ ಎಂದು ಕಿಡಿ ಕಾರಿದ್ದಾರೆ.
ಈ ವಿದೇಶೀ ಸಂತಾನ ಮತ್ತು ಪಟಾಲಮಿನ ಮಾತಿಗೇಕೆ ಮಾಧ್ಯಮಗಳು ಪ್ರಾಶಸ್ತ್ಯ ಕೊಡುತ್ತವೆಯೋ.ಇವರ ಮನಸ್ಥಿತಿ ದೇಶವನ್ನು ಪರಭಾರೆ ಮಾಡುವುದರಲ್ಲಿ ಮಾತ್ರ ಆಸಕ್ತಿ.