ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎನ್ನುವ ವಿಡಿಯೋಗಳಿಗೆ ಮನೆಯಲ್ಲೇ ಕುಳಿತುಕೊಂಡು ಲೈಕ್ ಮಾಡುತ್ತೀರಿ, ಆದರೆ ನಿಮ್ಮ ಮನೆಯ ಮೂಲೆಯಲ್ಲೇ ರಾಶಿ ರಾಶಿ ಪ್ಲಾಸ್ಟಿಕ್ ಕೂತಿರುತ್ತದೆ.ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ದೊಡ್ಡ ಕೆಲಸವಲ್ಲ, ಮೊದಲು ನಿಮ್ಮ ಮನೆಯಿಂದಲೇ ಇದನ್ನು ಆರಂಭಿಸಿ.. ಹೇಗೆ ನೋಡಿ..
ಅಂಗಡಿಗೆ ಹೋಗುವಾಗ ಮನೆಯಲ್ಲೇ ಇರುವ ಕವರ್ ತೆಗೆದುಕೊಂಡು ಹೋಗಿ, ಅಂಗಡಿಯವ ಕವರ್ ಕೊಟ್ಟೇ ಕೊಡುತ್ತಾನೆ ಆದರೆ ನಿಮ್ಮ ಮನೆಯಲ್ಯಾಕೆ ಪ್ಲಾಸ್ಟಿಕ್ ಕವರ್ ಗುಡ್ಡೆ ಹಾಕ್ತೀರಿ?
ಹಾಲಿನ ಪ್ಯಾಕೆಟ್, ಕಾಫಿ ಪುಡಿ ಹೀಗೆ ದಿನಸಿ ಕವರ್ಗಳನ್ನು ಕತ್ತರಿಸುವಾಗ ಬೀಳಿಸುವ ಪುಟಾಣಿ ಪೀಸ್ನ್ನು ಎತ್ತಿ ಅದೇ ಕವರ್ಗೆ ಹಾಕಿ ಬಿಸಾಡಿ. ಕಸ ಆರಿಸುವವರಿಗೆ ದೊಡ್ಡ ಕವರ್ ಕಾಣುತ್ತದೆ. ಆದರೆ ಈ ಪುಟಾಣಿ ಪೀಸಸ್ ಭೂಮಿಯಲ್ಲೇ ಉಳಿಯುತ್ತವೆ.
ಒಮ್ಮೆ ಅಡುಗೆ ಮನೆಗೆ ಹೋಗಿ ನೋಡಿ.. ಅಲ್ಲಿರುವ ಪ್ಲಾಸ್ಟಿಕ್ ಡಬ್ಬಿಗಳನ್ನು, ಸ್ಟೀಲ್, ಸಿಲ್ವಾರ, ಗಾಜು ಹಾಗೂ ಪಿಂಗಾಣಿ ಡಬ್ಬಿಗೆ ಬದಲಾಯಿಸಿ.
ಅಂಗಡಿಗಳನ್ನು ಸರ್ಫ್, ಓಟ್ಸ್ ಇನ್ನಿತರ ಪದಾರ್ಥಗಳನ್ನು ಕೊಳ್ಳುವಾಗ ಡಬ್ಬಿ ಬದಲು ರೀಫಿಲ್ ಬ್ಯಾಗ್ ತನ್ನಿ.
ಕುಡಿದು ಎಸೆಯುವ ಪ್ಲಾಸ್ಟಿಕ್ ಕಪ್ಗಳನ್ನು ಬಳಕೆ ಮಾಡಬೇಡಿ, ನಿಮ್ಮ ಬಳಿಯೇ ರೀ ಯೂಸಬಲ್ ಕಪ್ ಇಟ್ಟುಕೊಳ್ಳಿ, ಅದನ್ನೇ ಎಲ್ಲಾ ಕಡೆ ಬಳಸಿ.