ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ನನ್ನು ನೋಡಲು ಆಪ್ತರು ಸೇರಿ ಹಲವು ಸೆಲೆಬ್ರಿಟಿಗಳು ಪ್ರಯತ್ನಿಸುತ್ತಿದ್ದಾರೆ. ಕೆಲವರಿಗೆ ಮಾತ್ರ ಭೇಟಿಯಾಗಲು ಅವಕಾಶ ಸಿಕ್ಕಿದೆ. ಈ ನಡುವೆ ತೆಲುಗಿನ ಖ್ಯಾತ ನಟ ನಾಗಶೌರ್ಯ ಸದ್ದಿಲ್ಲದೆ ನಟ ದರ್ಶನ್ ನನ್ನು ಭೇಟಿಯಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆಯಾದಾಗ ದರ್ಶನ್ ಬೆಂಬಲಕ್ಕೆ ನಿಂತಿದ್ದ ತೆಲುಗಿನ ಖ್ಯಾತ ನಟ ನಾಗಶೌರ್ಯ, ದರ್ಶನ್ ಕುಟುಂಬದ ಜತೆ ಹೋಗಿ ಜೈಲಲ್ಲಿ ದಾಸನ ಭೇಟಿಯಾಗಿದ್ದಾರೆ.
ತನ್ನನ್ನು ನೋಡಲು ಬಂದ ನಾಗಶೌರ್ಯರ ಯೋಗಕ್ಷೇಮವನ್ನು ದರ್ಶನ್ ವಿಚಾರಿಸಿದ್ದಾರೆ. ಹೇಗಿದ್ಯಾ ಹೀರೊ, ಹೇಗೆ ನಡೆಯುತ್ತಿದೆ ಪ್ರಾಜೆಕ್ಟ್, ಯಾವ ಫಿಲಂ ಶೂಟಿಂಗ್ ನಡೆಯುತ್ತಿದೆ. ರಿಲೀಸ್ ಯಾವಾಗ ಅಂತೆಲ್ಲಾ ದರ್ಶನ್ ಮಾತುಕತೆ ನಡೆಸಿದ್ದು, ಆತ್ಮೀಯವಾಗಿ ಮಾತನಾಡಿ ನಾಗಶೌರ್ಯರನ್ನು ಕಳುಹಿಸಿಕೊಟ್ಟಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ಗೆ ಕೆಲವು ಅಭಿಮಾನಿಗಳು ಹಾಗೂ ನಟ ನಟಿಯರು ಬೆಂಬಲ ನೀಡಿದ್ದಾರೆ. ಕೆಲವರು ದರ್ಶನ್‌ಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಸಾರ್ವಜನಿಕ ಆಕ್ರೋಶದ ನಡುವೆ, ಟಾಲಿವುಡ್ ಹೀರೊ ನಾಗ ಶೌರ್ಯ ದರ್ಶನ್‌ಗೆ ಇತ್ತೀಚೆಗೆ ಬೆಂಬಲ ನೀಡಿದ್ದಾರೆ. ʻದರ್ಶನ್ ಅಣ್ಣ ಕನಸಿನಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ. ನಾನು ಈ ಸುದ್ದಿಯನ್ನು ಒಪ್ಪಿಕೊಳ್ಳಲಾರೆಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.
‘ಘಟನೆ ಕೇಳಿದಾಗ ಮೃತರ ಕುಟುಂಬಕ್ಕೆ ನನ್ನ ಹೃದಯ ಮರುಗುತ್ತದೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿಯನ್ನು ನೀಡಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈ ವಿಷಯದಲ್ಲಿ ಜನರು ಈಗಾಗಲೇ ತೀರ್ಮಾನಗಳಿಗೆ ಬರುತ್ತಿರುವುದನ್ನು ನೋಡುವುದು ಕಷ್ಟವಾಗುತ್ತದೆ. ದರ್ಶನ್ ಅಣ್ಣ ಕನಸಿನಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ. ದರ್ಶನ್ ಅವರ ಉದಾರತೆ, ಸಹೃದಯ ಸ್ವಭಾವ ಮತ್ತು ಇತರರಿಗೆ ಸಹಾಯ ಮಾಡುವ ಬದ್ಧತೆಯನ್ನು ಅವರನ್ನು ಚೆನ್ನಾಗಿ ಬಲ್ಲವರು ತಿಳಿದುಕೊಂಡಿದ್ದಾರೆ. ಅನೇಕರಿಗೆ ಶಕ್ತಿಯ ಆಧಾರಸ್ತಂಭವಾಗಿದ್ದಾರೆ’ಎಂದು ಬರೆದುಕೊಂಡಿದ್ದರು.
ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇದೆ. ಸತ್ಯವು ಶೀಘ್ರದಲ್ಲೇ ಹೊರಬರುತ್ತದೆ. ಇನ್ನೊಂದು ಕುಟುಂಬವು ಸಹ ಬಹಳವಾಗಿ ನರಳುತ್ತಿದೆ ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಹಾನುಭೂತಿಗೆ ಹೆಸರುವಾಸಿಯಾದ ಅಣ್ಣ ಅವರು ನಿರಪರಾಧಿ ಎಂಬುದು ಸಾಬೀತಾಗುತ್ತದೆ. ನಿಜವಾದ ಅಪರಾಧಿ ಯಾರೆಂಬುದು ಗೊತ್ತಾಗುತ್ತದೆ’ ಎಂದಿದ್ದರು.