ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಅದ್ಧೂರಿಯಾಗಿ ಆರಂಭವಾಗಿದ್ದು, ಮೊದಲ ದಿನವೇ ಚೀನಾ ಚಿನ್ನದ ಪದಕ ಗೆಲ್ಲುವ ಮೂಲಕ ಗಮನ ಸೆಳೆದಿದೆ.
10 ಮೀಟರ್ ಏರ್ ರೈಫಲ್ ಮಿಶ್ರ ತಂಡಗಳ ಸ್ಪರ್ಧೆಯಲ್ಲಿ ಚೀನಾದ ಶೂಟರ್‌ಗಳಾದ ಹುವಾಂಗ್ ಯುಟಿಂಗ್ ಮತ್ತು ಶೆಂಗ್ ಲಿಹಾವೊ ಜೋಡಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚೀನಾಗೆ ಮೊದಲ ಚಿನ್ನದ ಪದಕ ತಂದುಕೊಟ್ಟರು. ಇದು ಪ್ರಸಕ್ತ ಕ್ರೀಡಾಕೂಟದಲ್ಲಿ ಗೆದ್ದ ಮೊದಲ ಚಿನ್ನದ ಪದಕವೂ ಆಗಿದೆ
ಏರ್ ರೈಫಲ್ ಸ್ಪರ್ಧೆಯ ಫೈನಲ್ ರೌಂಡ್‌ನಲ್ಲಿ ದಕ್ಷಿಣ ಕೊರಿಯಾದ ಲಿಹಾವೊ ಶೆಂಗ್‌ನ ಜಿಹ್ಯೆನ್ ಕೆಯುಮ್ – ಹಜುನ್ ಪಾರ್ಕ್ ಜೋಡಿಯನ್ನು 16-12 ಅಂತರದಲ್ಲಿ ಸೋಲಿಸುವ ಮೂಲಕ ಹುವಾಂಗ್ ಮತ್ತು ಶೆಂಗ್ ಜೋಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು.
ಇದಕ್ಕೂ ಮುನ್ನ 10 ಮೀಟರ್ ಮಿಶ್ರ ತಂಡಗಳ ಏರ್ ರೈಫಲ್ ಸ್ಪರ್ಧೆಯಲ್ಲಿ ಕಝಕಿಸ್ತಾನದ ಅಲೆಕ್ಸಾಂಡ್ರಾಲೆ ಮತ್ತು ಇಸ್ಲಾಂ ಸತ್ಪಯೇವ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಇದು ಈ ಟೂರ್ನಿಯ ಮೊದಲ ಪದಕವಾಗಿದೆ.