ಬೆಂಗಳೂರಿಗೆ ಮಾಂಸ ಸಾಗಾಟ: ಪೊಲೀಸರಿಂದ 3 ಪ್ರತ್ಯೇಕ FIR ದಾಖಲು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿಗೆ ಬೇರೆ ರಾಜ್ಯಗಳಿಂದ ಅಕ್ರಮವಾಗಿ ಮಾಂಸ ಸಾಗಿಸುತ್ತಿದ್ದ ಸಂಬಂಧ ಪೊಲೀಸರಿಂದ 3 ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ.

ರೈಲುಗಳ ಮೂಲಕ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಮಾಂಸ ಸಾಗಾಟ ಮಾಡುತ್ತಿದ್ದ ಸಂಬಂಧ 90 ಪಾರ್ಸಲ್ ಗಳನ್ನು ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು.ಅಲ್ಲದೇ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಅದು ನಾಯಿ ಮಾಂಸವೋ ಅಥವಾ ಬೇರೆ ಮಾಂಸವೋ ಎನ್ನುವ ಬಗ್ಗೆ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು.

ಈ ಪ್ರಕರಣದ ಸಂಬಂಧ ರಾಜ್ಯದಿಂದ ಬೆಂಗಳೂರಿಗೆ ಮಾಂಸ ಸಾಗಾಟದ ಕಾರಣ, ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮೂರು ಎಫ್‌ಐಆರ್ ದಾಖಲಿಸಲಾಗಿದೆ.

ಒಂದು ಅಕ್ರಮವಾಗಿ ಮಾಂಸ ಮಾರಾಟದ ಸಂಬಂಧ ಎಫ್‌ಐಆರ್ ಆಗಿದ್ದರೇ, ಎರಡನೇಯರು ಅಕ್ರಮವಾಗಿ ಗುಂಪು ಗೂಡಿ ಗಲಾಟೆ ಮಾಡಿದ ಆರೋಪ ಹಾಗೂ ಕಾನೂನು ಬಾಹಿರ ಚಟುವಟಿಕೆ ಆರೋಪದಡಿ 2ನೇ ಎಫ್‌ಐಆರ್ ದಾಖಲಿಸಲಾಗಿದೆ.

ಇನ್ನೂ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದಂತ ಆರೋಪದಡಿ ಪುನೀತ್ ಕೆರೆಹಳ್ಳಿ ಹಾಗೂ ಸಹಚರರ ವಿರುದ್ಧ 3ನೇ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!