ಹೊಸ ದಿಗಂತ ವರದಿ,ಪುತ್ತೂರು :
ಪುತ್ತೂರಿನ ಬನ್ನೂರಿನಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆಗೈದ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ಬನ್ನೂರಿನಲ್ಲಿ ತಾಯಿ ಮಗನಿಗೆ ಗಲಾಟೆ ನಡೆಯುತ್ತಿತ್ತು. ಈ ವಿಚಾರವಾಗಿ ವಿಚಾರಣೆಗೆಂದು ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿಯ ತಾಯಿ ಚಂದ್ರಾವತಿ ಅವರನ್ನು ಗಲಾಟೆಯ ಕುರಿತು ಪೊಲೀಸರು ವಿಚಾರಿಸಿದ್ದಾರೆ.ಈ ವೇಳೆ ಏಕಾಏಕಿ ಮನೆಯ ಒಳಗಿನಿಂದ ಬಂದ ಆರೋಪಿ ತೇಜಸ್ ಪೊಲೀಸರು ನಮ್ಮ ಮನೆಗೆ ಯಾಕೆ ಬಂದಿದ್ದಿರಿ ಎಂದು ಅವ್ಯಾಚ್ಯವಾಗಿ ಬೈದಿದ್ದಾನೆ.
ಅಲ್ಲದೆ ಪೊಲೀಸರ ಕಾರಿಗೆ ಮನೆಯಲ್ಲಿದ್ದ ಕಾರನ್ನು ಅಡ್ಡವಾಗಿ ಇಟ್ಟು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿ ನಿಂದಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾನೆ.
ಪೊಲೀಸ್ ಸಿಬ್ಬಂದಿ ವಿನಾಯಕ ಅವರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಸದ್ಯ ಕೆದಂಬಾಡಿ ಗ್ರಾಮದ ಶೀನಪ್ಪ ಗೌಡ ಎಂಬವರ ದೂರಿನಂತೆ ತೇಜಸ್ ನ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.