CINE | ಕರೀನಾ ಕಪೂರ್ ಮಕ್ಕಳನ್ನು ನೋಡಿಕೊಳ್ಳುವ ದಾದಿಗೆ ಲಕ್ಷ ಲಕ್ಷ ರೂಪಾಯಿ ಸಂಬಳ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಕರೀನಾ ಕಪೂರ್‌ ಹಾಗೂ ಸೈಫ್‌ ಅಲಿ ಖಾನ್‌ ತಮ್ಮ ಮುದ್ದಿನ ಮಕ್ಕಳನ್ನು ನೋಡಿಕೊಳ್ಳೋದಕ್ಕೆ ದಾದಿಯೊಬ್ಬರನ್ನು ನೇಮಕ ಮಾಡಿಕೊಂಡಿದ್ದಾರೆ. ಇವರ ಹೆಸರು ಲಲಿತಾ ಡಿಸಿಲ್ವಾ, ಇವರಿಗೆ ಲಕ್ಷ ಲಕ್ಷ ಸಂಬಳವಂತೆ..

When Kareena Kapoor Talked About Taimur's Nanny's Salary

ಸಂದರ್ಶನವೊಂದರಲ್ಲಿ ಲಲಿತಾ ಡಿಸಿಲ್ವಾ ಮಾತನಾಡಿದ್ದಾರೆ. ಸೈಫ್ ಹಾಗೂ ಕರೀನಾ ತಮ್ಮನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ‘ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ತುಂಬಾ ಸರಳ ವ್ಯಕ್ತಿಗಳು. ಕರೀನಾ-ಸೈಫ್ ಉಪಹಾರಕ್ಕಾಗಿ ಏನನ್ನು ತಿನ್ನುತ್ತಾರೋ ಅದನ್ನೇ ಸಿಬ್ಬಂದಿಗೂ ನೀಡುತ್ತಾರೆ. ಆಹಾರದಲ್ಲಿ ಏನೂ ವ್ಯತ್ಯಾಸವಿಲ್ಲ. ಕೆಲವೊಮ್ಮೆ ನಾವು ಒಟ್ಟಿಗೆ ಕುಳಿತು ಊಟ ಮಾಡುತ್ತೇವೆ. ನಾವು ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತೇವೆ’ ಎಂದಿದ್ದಾರೆ.

Kareena Kapoor Khan and Saif Ali Khan eat the same food as their staff,  reveals Taimur's caretaker

‘ಲಲಿತಾ ಡಿಸಿಲ್ವಾ ತಿಂಗಳಿಗೆ 2.5 ಲಕ್ಷ ಸಂಬಳ ಪಡೆಯುತ್ತಾರಾ?’ ಹೀಗೊಂದು ಪ್ರಶ್ನೆ ಕೇಳಲಾಯಿತು. ಈ ಬಗ್ಗೆ ಲಲಿತಾ ಡಿಸಿಲ್ವಾ ಅವರು ಸ್ಪಷ್ಟನೆ ನೀಡಿದ್ದಾರೆ. ‘2.5 ಲಕ್ಷ ರೂಪಾಯಿ? ಹಾಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ನಿಮ್ಮ ಬಾಯಲ್ಲಿ ಸಕ್ಕರೆ ಬೀಳಲಿ. ಇವೆಲ್ಲ ಕೇವಲ ವದಂತಿಗಳು’ ಎಂದಿದ್ದಾರೆ.

Taimur's nanny: Everything you ever wanted to know about starkid's caretaker ಲಲಿತಾ ಡಿಸಿಲ್ವಾ ಅವರು ಕಳೆದ ಹಲವಾರು ವರ್ಷಗಳಿಂದ ತೈಮೂರ್ ಮತ್ತು ಜೆಹ್ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!