ಆರ್ಡರ್‌ ಮಾಡಿದ ಊಟದಲ್ಲಿ ಉಪ್ಪಿನಕಾಯಿ ಇಲ್ಲ, ಹೊಟೇಲ್‌ಗೆ 35ಸಾವಿರ ರೂ. ದಂಡ ವಿಧಿಸಿದ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಒಂದು ಕಂಪ್ಲೀಟ್‌ ಮೀಲ್ಸ್‌ ಎಂದರೆ ಉಪ್ಪಿನಕಾಯಿ ಮಸ್ಟ್‌, ಆದರೆ ಊಟದ ಜೊತೆ ಉಪ್ಪಿನಕಾಯಿ ಕೊಡದ ಹೊಟೇಲ್‌ ಒಂದು ದಂಡ ಕಟ್ಟುವಂತಾಗಿದೆ.

ಸಿ ಆರೋಕಿಯಾಸಾಮಿ ಎನ್ನುವರು 2022ರ ನವೆಂಬರ್​ನಲ್ಲಿ ತನ್ನ ಸಂಬಂಧಿಯೊಬ್ಬರ ಮೊದಲ ವರ್ಷದ ಪುಣ್ಯತಿಥಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗುವ 25 ಜನರಿಗೆ ಬಾಲಮುರುಗನ್ ಹೋಟೆಲ್​ನಿಂದ ಪ್ರತಿ ಊಟಕ್ಕೆ 80 ರೂಪಾಯಿಯಂತೆ ಫುಡ್ ತರಿಸಿಕೊಂಡಿದ್ದರು.

ಇದಕ್ಕೆ 2000 ರೂ.ಗಳನ್ನು ಹೋಟೆಲ್​ಗೆ ಪಾವತಿ ಮಾಡಬೇಕಾಗಿತ್ತು. ಆದರೆ ಈ ಊಟದ ಸಮಯದಲ್ಲಿ ಉಪ್ಪಿನಕಾಯಿ ತಂದಿರಲಿಲ್ಲ ಎಂದು ಈ ಬಗ್ಗೆ ಹೋಟೆಲ್​ನವರಿಗೆ ತಿಳಿಸಿದ್ದಾರೆ. ಇದಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ. ಅದರಂತೆ ಕಾರ್ಯಕ್ರಮಕ್ಕೆ ಉಪ್ಪಿನಕಾಯಿ ತರಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಎಲ್ಲರ ಊಟ ಮುಗಿದು ಹೋಗಿತ್ತು ಎಂದು ಹೇಳಲಾಗಿದೆ.

ಹೀಗಾಗಿ ಉಪ್ಪಿನಕಾಯಿ ವಾಪಸ್ ತೆಗೆದುಕೊಂಡು ಹೋಗುವಂತೆ ಸಿ ಆರೋಕಿಯಾಸಾಮಿ ತಿಳಿಸಿದ್ದಾರೆ. ಆದರೆ ಇಲ್ಲ, ಅದನ್ನು ತಂದಿದ್ದರಿಂದ ನೀವು ಹಣ ಪಾವತಿ ಮಾಡಬೇಕೆಂದು ಹೇಳಿದಾಗ ಹೋಟೆಲ್​ ಮಾಲೀಕರ ಹಾಗೂ ಗ್ರಾಹಕನ ನಡುವೆ ವಾದ-ವಿವಾದ ನಡೆದು ಕೇಸ್​ ಕೋರ್ಟ್​ ಮೆಟ್ಟಿಲೇರಿತ್ತು. ಈ ಸಂಬಂಧ ವಿಚಾರಣೆ ಮಾಡಿದ ತಮಿಳುನಾಡಿನ ವಿಲ್ಲುಪುರಂನ ಗ್ರಾಹಕರ ನ್ಯಾಯಾಲಯ ಹೋಟೆಲ್​ಗೆ ದಂಡ ವಿಧಿಸಿದೆ.

ಹೋಟೆಲ್​ ಸೇವೆಯಲ್ಲಿ ಕೊರತೆಯಾಗಿದೆ. ಇದು ಗ್ರಾಹಕರಿಗೆ ದೈಹಿಕ ತೊಂದರೆ ಮತ್ತು ಮಾನಸಿಕ ಸಂಕಟ ಉಂಟುಮಾಡಿದೆ. ಹೀಗಾಗಿ ಹೋಟೆಲ್​ನವರು 5,000 ರೂಪಾಯಿಗಳ ಕೋರ್ಟ್​ನ ವ್ಯಾಜ್ಯ ವೆಚ್ಚ ಹಾಗೂ 30,000 ರೂಪಾಯಿ ದಂಡ ಗ್ರಾಹಕರಿಗೆ ನೀಡಬೇಕೆಂದು ಆದೇಶ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!