ದಿಗಂತ ವರದಿ ಅಂಕೋಲಾ :
ಗಂಗಾವಳಿ ನದಿಯಲ್ಲಿ ಬ್ರಿಡ್ಜ್ ಮೌಂಟೆಡ್ ಡೈಜಿಂಗ್ ಮೂಲಕ ಕಾರ್ಯಚರಣೆ ನಡೆಸುವ ಕುರಿತಂತೆ ತ್ರಿಶೂರಿನ ತಾಂತ್ರಿಕ ತಂತ್ರಜ್ಞರಿಂದ ಲಿಖಿತ ವರದಿ ಕೋರಿದ್ದು ಅವರ ವರದಿಯಂತೆ ನೇವಿ, ಕೋಸ್ಟ್‌ಗಾರ್ಡ್ ,ಎನ್.ಡಿ.ಆರ್.ಎಫ್. ಎಸ್.ಡಿ.ಆರ್.ಎಫ್ ಮತ್ತು ಅಗ್ನಿಶಾಮಕ ಇಲಾಖೆ ವತಿಯಿಂದ ಕಾರ್ಯಾಚರಣೆ ನಡೆಯಲಿದೆ.
ಈ ಬಗ್ಗೆ ಜಿಲ್ಲಾಡಳಿತ ಹೇಳಿಕೆ ನೀಡಿದ್ದು,ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ಇದುವರೆಗೆ ನಾಪತ್ತೆ ಯಾಗಿರುವ 3 ವ್ಯಕ್ತಿಗಳ ಹುಡುಕಾಟ ಕಾರ್ಯಾಚರಣೆಯು ಬೋಟುಗಳ ಮೂಲಕ ಮಂಗಳವಾರವೂ ಮುಂದುವರೆಯಲಿದೆ ಎಂದಿದೆ.
ಶಾಸಕ ಸತೀಶ ಸೈಲ್ ಸಹ ಈ ಮಾಹಿತಿಯನ್ನು ದೃಢೀಕರಿಸಿದ್ದು ಮಂಗಳವಾರ ತ್ರಿಶೂರಿನಿಂದ ತಜ್ಞ ಇಂಜಿನಿಯರ್ಸ್ ಆಗಮಿಸಿ ಪರಿಶೀಲನೆ ನಡೆಸಲಿದ್ದು, ಅವರ ವರದಿ ಆಧಾರದಲ್ಲಿ ಮತ್ತೆ ಕಾರ್ಯಾಚರಣೆ ಬಗ್ಗೆ ನಿರ್ಧರಿಸಲಾಗುವುದು ಎಂದರು.