Paris Olympics 2024 | ಇತಿಹಾಸದಲ್ಲೇ ಸಿಂಗಲ್ಸ್ ಪ್ರೀ ಕ್ವಾರ್ಟರ್‌ ಫೈನಲ್ ತಲುಪಿದ ಸ್ಟಾರ್‌ ಪ್ಲೇಯರ್ ಮಣಿಕಾ ಬತ್ರಾ

ಹ‌ೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ಯಾರಿಸ್‌ನ ಒಲಿಂಪಿಕ್ಸ್‌ನಲ್ಲಿ ನಡೆಯುತ್ತಿರುವ  ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಭಾರತದ ಮಣಿಕಾ ಬತ್ರಾ ಪ್ರಿ ಕ್ವಾರ್ಟರ್‌ಫೈನಲ್​ಗೆ ಎಂಟ್ರಿ ಕೊಟ್ಟಿದ್ದಾರೆ.

ಇದರೊಂದಿಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸೋಮವಾರ ನಡೆದ ಮಹಿಳಾ ಸಿಂಗಲ್ಸ್ ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಮಣಿಕಾ ಬತ್ರಾ ಹಾಗೂ ಫ್ರಾನ್ಸ್​ನ ಪ್ರಿತಿಕಾ ಪವಾಡೆ ಮುಖಾಮುಖಿಯಾಗಿದ್ದರು.

ಅತ್ಯುತ್ತಮ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲ ಸೆಟ್ ಅನ್ನು ಮಣಿಕಾ ಬತ್ರಾ 11-9 ಸ್ಕೋರ್​ಗಳ ಅಂತರದಿಂದ ಗೆದ್ದುಕೊಂಡರು. ಇನ್ನು ದ್ವಿತೀಯ ಸೆಟ್​ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಭಾರತೀಯ ತಾರೆ 11-6 ಅಂತರದಿಂದ ಸುಲಭವಾಗಿ ಜಯ ಸಾಧಿಸಿದರು.

ಒಲಿಂಪಿಕ್ ಗೇಮ್ಸ್‌ ಇತಿಹಾಸದಲ್ಲೇ ಸಿಂಗಲ್ಸ್ ಪ್ರೀ ಕ್ವಾರ್ಟರ್‌ಫೈನಲ್ ತಲುಪಿದ ಭಾರತದ ಮೊದಲ ಟೇಬಲ್ ಟೆನ್ನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಮಣಿಕಾ ಬತ್ರಾ ಪಾತ್ರರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!