ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಣಿ – ಮೈಸೂರ್ ರಾಷ್ಟ್ರೀಯ ಹೆದ್ದಾರಿ 275ರ ಕೌಡಿಚಾರ್ ಸಮೀಪ ಹೆದ್ದಾರಿಗೆ ಗುಡ್ಡ ಕುಸಿತ ಉಂಟಾಗಿ ಸಂಚಾರ ಬಂದ್ ಆಗಿದೆ.
ಬೆಳಗ್ಗೆ ಭಾರೀ ಪ್ರಮಾಣದಲ್ಲಿ ಮಣ್ಣು ಮಣ್ಣು ರಸ್ತೆಗೆ ಕುಸಿದಿದೆ. ಜತೆಗೆ ಮರಗಳು, ವಿದ್ಯುತ್ ಕಂಬ ಕುಸಿದಿದೆ.
ವಾಹನಗಳು ಪಟ್ಟೆ-ರೆಂಜ ಮಾರ್ಗವಾಗಿ, ಕೌಡಿಚಾರ್ ನಿಂದ ಕೆಯ್ಯುರು ಮಾರ್ಗವಾಗಿ ಸಂಚರಿಸುತ್ತಿವೆ.
ಪಟ್ಟೆ-ಮುಂಡೋಳೆ-ಈಶ್ವರ ಮಂಗಲ ರಸ್ತೆಯ ಪಟ್ಟೆ ಸಮೀಪ ರಸ್ತೆ ಮುಳುಗಡೆಯಾಗಿದೆ.
ಇಲ್ಲಿ ವರ್ತುಲವಾಗಿ ಸೀರೆ ಹೊಳೆ ಹರಿಯುತ್ತಿದ್ದು, ಕಿಂಡಿ ಅನೇಕಟ್ಟಿನಲ್ಲಿ ಮರಗಳು ಸಿಲುಕಿ ಈ ವರ್ಷದ ಪ್ರಥಮ ಸಂಗಮ ಉಂಟಾಗಿದೆ. ರಸ್ತೆಯ ಮೇಲೆ ನೀರು ತುಂಬಿ ಹರಿಯುತ್ತಿದೆ.