ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿರೂರು ಗುಡ್ಡ ಕುಸಿತದಿಂದಾಗಿ ಕಣ್ಮರೆಯಾದ ವಾಹನಗಳು ಮತ್ತು ಮೂವರು ವ್ಯಕ್ತಿಗಳ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ತೀವ್ರಗೊಳಿಸಲು ಕೇರಳದಿಂದ ಬಾರ್ಜ್ ಮೌಂಟೆಡ್ ಪೊಕ್ಲೆನ್ ಕಾರ್ಯಾಚರಣೆ ಕೈಗೊಳ್ಳುವ ಉದ್ದೇಶದಿಂದ ಕೇರಳದಿಂದ ಬಾರ್ಜ್ ಮೌಂಟೆಡ್ ಪೊಕ್ಲೆನ್ ವಿನ್ಯಾಸಕಾರರು ಕೇರಳ ಸರ್ಕಾರದ ಪ್ರತಿನಿಧಿ ವಿವೇನ್ ಸಿ ಅವರ ಜೊತೆ ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕ ಸತೀಶ ಸೈಲ್ ಅವರ ವಿಶೇಷ ಆಸಕ್ತಿ ಪ್ರಯತ್ನದಿಂದಾಗಿ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಯಾವ ರೀತಿಯಲ್ಲಿ ಕೈಗೊಳ್ಳಬೇಕು ಎನ್ನುವ ಕುರಿತು ಚರ್ಚೆ ನಡೆಸಿದರು.
ಕೇರಳದ ತ್ರಿಚೂರ್ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಉತ್ತರ ಕನ್ನಡ ಜಿಲ್ಲಾಡಳಿತದ ಅನುಮತಿ ಮೇರೆಗೆ ಕಾರ್ಯಾಚರಣೆ ನಡೆಯಲಿದ್ದು ಇದರಿಂದಾಗಿ ನದಿಯಲ್ಲಿ ತುಂಬಿರುವ ಮಣ್ಣು ತೆರುವು ಮಾಡಲು ಸುಲಭ ಆಗಲಿದೆ ಮತ್ತು ಮುಳುಗು ತಜ್ಞರಿಗೆ ಅನುಕೂಲಕರ ವಾತಾವರಣ ಸೃಷ್ಟಿ ಯಾಗಲಿದೆ ಎಂದು ತಿಳಿದು ಬಂದಿದೆ.