ಹೊಸದಿಗಂತ ಡಿಜಿಟಲ್ ಡೆಸ್ಕ್;
|ಲಷ್ಕರ್ ನಾಯಕ ಅಬೂ ಮೂಸಾ ಕಾಶ್ಮೀರಿ, ಹಿಂದುಗಳ ಶಿರಚ್ಛೇದಕ್ಕೆ ಕರೆ ನೀಡಿದ್ದಾನೆ.
ಎಲ್‌ಓಸಿಯ ಪಾಕ್ ರಾವಲ್‌ಕೋಟ್‌ನಲ್ಲಿ ಮಾತಾಡಿರುವ ಮೂಸಾ, ಶಾಂತಿಯುತ ಮನವಿ ಮೂಲಕ ನಮಗೆ ಸ್ವಾತಂತ್ರ್ಯ ಸಿಕ್ಕಲ್ಲ. ಇನ್ನೇನಿದ್ದರೂ ಜಿಹಾದ್ ಆರಂಭಿಸೋಣ.. ಸಿಕ್ಕ ಸಿಕ್ಕ ಹಿಂದುಗಳ ತಲೆ ಕಡಿಯೋಣ. ಆಗಲೇ ನಮಗೆ ಸ್ವಾತಂತ್ರ್ಯ ಸಿಕ್ಕೋದು ಅಂತ ಸಾರ್ವಜನಿಕರನ್ನು ಪ್ರಚೋದಿಸಿದ್ದಾನೆ.
ಜೊತೆಗೆ ಕಾಶ್ಮೀರ ಸಮಸ್ಯೆ ಜಿಹಾದ್, ಟೆರರಿಸಂನಿಂದ ಮಾತ್ರವೇ ಬಗೆಹರಿಸಲು ಸಾಧ್ಯ ಅಂತ ಈಗಾಗಲೇ ಪ್ರಧಾನಿ, ಸಚಿವರಿಗೆ ನಾನು ಹೇಳಿದ್ದೇನೆ ಅಂತಲೂ ಹೇಳಿದ್ದಾನೆ.
ಪಹಲ್ಗಾಮ್ ಉಗ್ರಕೃತ್ಯಕ್ಕೂ ಮುನ್ನ ಇದೇ ರೀತಿಯಾಗಿ ಈ ಉಗ್ರ ಕಾಶ್ಮೀರಿ ಹಿಂದುಗಳ ನರಮೇಧಕ್ಕೆ ಕರೆ ನೀಡಿದ್ದ. ಈ ಮಧ್ಯೆ, ಪಾಕಿಸ್ಥಾನದ ಖೈಬರ್ ಪ್ರಾಂತ್ಯದಲ್ಲಿ ಪಾಕ್ ತಾಲಿಬಾನ್ ಉಗ್ರರು ಪೊಲೀಸ್ ವಾಹನವನ್ನೇ ಉಡಾಯಿಸಿದ್ದಾರೆ. ದುರ್ಘಟನೆಯಲ್ಲಿ 7 ಪೊಲೀಸರು ದುರ್ಮರಣಕ್ಕೀಡಾಗಿದ್ದಾರೆ.


