ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ವಯನಾಡು ಜಿಲ್ಲೆಯ ಚೂರಲ್ ಮಲ ಮತ್ತು ಮುಂಡಕೈ ನಡೆದ ಭೂಕುಸಿತಕ್ಕೆ ಸಾವಿಗೀಡಾದವರ ಸಂಖ್ಯೆ 238 ಕ್ಕೆ ತಲುಪಿದೆ. ಸರ್ಕಾರ ಅಧಿಕೃತವಾಗಿ 143 ಸಾವುಗಳನ್ನು ದೃಢಪಡಿಸಿದೆ. ಈ ಪೈಕಿ 75 ಜನರನ್ನು ಗುರುತಿಸಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಡಕೈ ನದಿಯಲ್ಲಿ ಪ್ರವಾಹ ಜೋರಾದರೂ ಸೇನೆ ಸೇತುವೆ ಕಾಮಗಾರಿ ಮುಂದುವರೆಸಿದೆ. ಕಳೆದ ದಿನ ಸೇನೆ ಸಿದ್ಧಪಡಿಸಿದ್ದ ಕಾಲುಸಂಕವೂ ಮುಳುಗಡೆಯಾಗಿತ್ತು. ಮಳೆಯಲ್ಲೂ ಯಾಂತ್ರೀಕೃತ ಹುಡುಕಾಟ ಮುಂದುವರಿದಿದೆ. ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ತಂದಿರುವ ಮಣ್ಣು ತೆಗೆಯುವ ಯಂತ್ರವನ್ನು ಬಳಸಿ ಮನೆಗಳ ಅವಶೇಷಗಳು ಮತ್ತು ಮಣ್ಣನ್ನು ಸ್ಥಳಾಂತರಿಸುವ ಮೂಲಕ ಶೋಧ ನಡೆಸಲಾಯಿತು. ಬೆ
ಭಾರೀ ಮಳೆ ಮತ್ತು ಜಲಾವೃತದಿಂದಾಗಿ, ಕುನ್ನಂಕುಲಂ – ತ್ರಿಶೂರ್ ರಾಜ್ಯ ಹೆದ್ದಾರಿಯಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಾಜ್ಯ ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ಚೂಂಡಲ್‌ನಿಂದ ತ್ರಿಶೂರ್ ಶೋಭಾ ಸಿಟಿವರೆಗೆ ಸಂಚಾರ ನಿಷೇಧಿಸಲಾಗಿತ್ತು. ಕೆ
ಚಾಲಿಯಾರ್ ನದಿಯಲ್ಲಿ ಇಂದಿನ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ನಾಳೆ(ಗುರುವಾರ) ಬೆಳಗ್ಗೆ ಶೋಧ ಕಾರ್ಯ ಪುನರಾರಂಭವಾಗಲಿದೆ. ಮಲಪ್ಪುರಂನ ವಾಳಕ್ಕಾಡ್‌ನ ಮಣ್ಣಂತ್ತಲ ಕಣಿವೆಯಿಂದ ಮಗುವಿನ ಮೃತದೇಹ ಪತ್ತೆಯಾಗಿದೆ.
ವಯನಾಡಿನ ಚೂರಲ್‌ಮಲ ಮತ್ತು ಮುಂಡಕೈ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. 210 ಸೈನಿಕರು ಐದು ಗುಂಪುಗಳಲ್ಲಿ ಸ್ಥಳಕ್ಕೆ ಬಂದಿದ್ದು, ಮಣ್ಣಿನಡಿಯಲ್ಲಿ ಸಿಲುಕಿರುವವರ ಪತ್ತೆಗೆ ದೆಹಲಿಯಿಂದ ಸ್ನಿಫರ್ ಡಾಗ್‌ಗಳನ್ನು ತರಿಸಲಾಗಿದೆ. ಟೆಟ್ರಾ ಟ್ರಕ್‌ಗಳನ್ನು ವಯನಾಡಿಗೆ ತಲುಪಿಸಲಾಗುವುದು ಎಂದು ಸೇನೆಯು ಮಾಹಿತಿ ನೀಡಿದೆ.