ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಯನಾಡು ದುರಂತದಲ್ಲಿ ಮಣ್ಣಿನಡಿ ಕೆದಕಿದಷ್ಟು ಮೃತದೇಹಗಳು ಪತ್ತೆಯಾಗುತ್ತಿವೆ, ಆದರೆ ಈ ದುರಂತ ಎಷ್ಟು ಭೀಕರವಾಗಿದೆ ಎಂದರೆ ರಕ್ಷಣಾ ಸಿಬ್ಬಂದಿಗೆ ಕೆಲವು ಕಡೆ ಬರೀ ಕೈಗಳು, ಕಾಲ್ಗಳು, ಹಾಗೂ ತಲೆಯೇ ಇಲ್ಲದ ಮೃತದೇಹಗಳು ಪತ್ತೆಯಾಗಿವೆ.
ಮಲ್ಪಾಡಿಯಲ್ಲಿ ಇರುವ ಸರ್ಕಾರಿ ಆಸ್ಪತ್ರೆಯ ಶವಾಗಾರವನ್ನು ತಾತ್ಕಾಲಿಕವಾಗಿ ಸಭಾಂಗಣಕ್ಕೆ ಶಿಫ್ಟ್ ಮಾಡಲಾಗಿದೆ. ಈ ಮೃತದೇಹಗಳು ಯಾರವು ಎಂದು ಗೊತ್ತೇ ಆಗದಂತಾಗಿದೆ. ದೇಹವೇ ಇರದ ಆರು ಬರೀ ಕೈಗಳು ಇದುವರೆಗೆ ಸಿಕ್ಕಿದೆ.
ಇನ್ನು ಮೂರು ತಲೆ ಸಿಕ್ಕಿವೆ. ಆದರೆ ಮುಖದ ಗುರುತೇ ಸಿಗದ ಮಟ್ಟಕ್ಕೆ ಮುಖ ಜಜ್ಜಿವೆ. ಹೀಗೆ ಎಂಟು ಪ್ರತ್ಯೇಕವಾದ ಕಾಲು ಸಿಕ್ಕಿವೆ. ಐದು ತಲೆ ಇರದ ಅರ್ಧ ದೇಹ ಸಿಕ್ಕಿವೆ. ಎಲ್ಲವನ್ನೂ ತಂದು ಎನ್‌ಡಿಆರ್‌ಎಫ್‌ನವರು ಶವಗಾರ ಸೇರಿಸಿದ್ದಾರೆ. ಸಂಬಂಧಿಕರು, ಆಪ್ತರನ್ನು ಕಳೆದುಕೊಂಡ ಜನರು ಶವಾಗಾರದ ಬಳಿ ಕಾದು ನಿಂತಿದ್ದಾರೆ. ಆಂಬುಲೆನ್ಸ್‌ನಲ್ಲಿ ನಮ್ಮವರ ಮೃತದೇಹ ಇರದೇ ಇರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.