ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ.
ನಿಖರತೆ ಮತ್ತು ಕ್ಷಿಪ್ರ ಸುತ್ತುಗಳಲ್ಲಿ ಒಟ್ಟು 590 ಅಂಕಗಳನ್ನು ಗಳಿಸಿದ ಮನು 2ನೇ ಸ್ಥಾನ ಪಡೆದು ಫೈನಲ್ಗೇರಿದರು. ಹಂಗರಿಯ ವೆರೋನಿಕಾ ಮೇಜರ್ ಅವರಿಗಿಂತ 2 ಅಂಕಗಳ ಹಿಂದೆ ಉಳಿದರು.
ಅರ್ಹತಾ ಸುತ್ತಿನ ಭಾಗವಾಗಿದ್ದ ಇಶಾ ಸಿಂಗ್ 18 ನೇ ಸ್ಥಾನ ಪಡೆದು ನಿರಾಸೆಗೆ ಒಳಗಾದರು. ಇದೇ ವೇಳೆ ಪ್ಯಾರಿಸ್ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಮನು ತನ್ನ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದರು. ಮನು ಈಗಾಗಲೇ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ 2 ಕಂಚಿನ ಪದಕಗಳನ್ನು ಗೆದ್ದುಕೊಂಡು ದಾಖಲೆ ಬರೆದಿದ್ದಾರೆ.
ಆಗಸ್ಟ್ 3ರಂದು ಮಧ್ಯಾಹ್ನ 1.30ಕ್ಕೆ ನಡೆಯಲಿರುವ ಫೈನಲ್ನಲ್ಲಿ ಅವರು ಸೆಣಸಲಿದ್ದಾರೆ