ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸ್ತಿದ್ದ ಪರಶುರಾಮ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪಿಎಸ್ಐ ಪರಶುರಾಮ್ ಅವರು ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದರು. ಮೊನ್ನೆ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ನಿನ್ನೆ ಸಂಜೆ ಪೊಲೀಸ್ ಕ್ವಾಟರ್ಸ್ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವರ್ಗಾವಣೆಗಾಗಿ 30 ಲಕ್ಷ ರೂ. ಕೇಳಿದ್ದರು ಎಂದು ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಪಿಎಸ್ಐ ಪತ್ನಿ ಶ್ವೇತಾ, ಪತಿಯನ್ನು ಕಳೆದುಕೊಂಡು ಕಣ್ಣೀರು ಇಡುತ್ತಿದ್ದಾರೆ. ಸ್ಥಳಕ್ಕೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಬರಲು ಹೇಳಿ. ಎಲ್ಲದಕ್ಕೂ ದುಡ್ಡು, ದುಡ್ಡು. ಮಗ ಪಪ್ಪಾ, ಪಪ್ಪಾ ಎಂದು ಓಡಿಕೊಂಡು ಇದ್ದ. ಅವನು ಬರ್ತಿದ್ದಂತೆ ಅಪ್ಪ ಎಲ್ಲಿ ಎಂದು ಕೇಳಿದ್ರೆ ನಾನು ಏನು ಹೇಳಲಿ? ನನ್ನ ಗಂಡನ ಸಾವಿಗೆ ನ್ಯಾಯ ಸಿಗಬೇಕು. ಶಾಸಕ ಎಲ್ಲಿ? ಕರೆಯಿರಿ ಎಂದು ಕಣ್ಣೀರು ಇಟ್ಟಿದ್ದಾರೆ.
ಮಧ್ಯರಾತ್ರಿಯೂ ನನ್ನ ಗಂಡ ಕರ್ತವ್ಯ ಅಂತಾ ಓಡಾಡುತ್ತಿದ್ದ. ನನ್ನ ಗಂಡ ಏನು ಅನ್ಯಾಯ ಮಾಡಿದ್ದ ಮೇಡಂ. ಕರೆಯಿರಿ ಎಂಎಲ್ಎಯನ್ನು, ರಾತ್ರಿ ಆಗಲಿ, ಬೆಳಗಾಗಲಿ ಎಂಎಲ್ಎ ಬರೋವರೆಗೂ ನಾನ್ ಇಲ್ಲಿಂದ ಹೋಗಲ್ಲ. ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸಿ ಮೇಡಂ. ನನ್ನ ಗಂಡ ಊಟ ಮಾಡೋದು ಬಿಟ್ಟು ಕೆಲಸ ಅಂತ ಓಡ್ತಿದ್ದ ಮೇಡಂ ಎಂದು ಯಾದಗಿರಿ ಎಸ್ಪಿ ಜಿ. ಸಂಗೀತಾ ಎದುರು ಶ್ವೇತಾ ಕಣ್ಣೀರು ಇಟ್ಟಿದ್ದಾರೆ.