Paris Olympics | ಆರ್ಚರಿಯಲ್ಲಿ ​ದೀಪಿಕಾ ಕುಮಾರಿಗೆ ಸೋಲು

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತದ ಹಿರಿಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಶನಿವಾರ ಕೊರಿಯಾದ ನಾಮ್ ಸುಹ್ಯಾನ್ ವಿರುದ್ಧ 6-4 ಅಂತರದಲ್ಲಿ ಸೋಲನುಭವಿಸಿದರು.

ಶನಿವಾರದ ದಿನವನ್ನು ದೀಪಿಕಾ ಉತ್ತಮವಾಗಿ ಪ್ರಾರಂಭಿಸಿದರು. ಆದರೆ ನಿಧಾನವಾಗಿ ಪ್ರದರ್ಶನ ಕಳೆದುಕೊಂಡರು.ದೀಪಿಕಾ ಅವರ ಸೋಲಿನೊಂದಿಗೆ, ಭಾರತದಿಂದ ಬಿಲ್ಲುಗಾರಿಕೆ ತಂಡವು ಪ್ಯಾರಿಸ್​ನಿಂದ ಬರಿಗೈಯಲ್ಲಿ ಮರಳುವಂತಾಗಿದೆ.

ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ಸೆಟ್​​ನಲ್ಲಿ ದೀಪಿಕಾ ಕುಮಾರಿ 9,10,9 ಅಂಕಗಳನ್ನು ಗಳಿಸಿ ಎರಡನೇ ಶ್ರೇಯಾಂಕಿತ ಬಿಲ್ಲುಗಾರ ನಾಮ್ ಸುಹೈಯಾನ್ ವಿರುದ್ಧ ಗೆಲುವು ಸಾಧಿಸಿದರು. ಎರಡನೇ ಸೆಟ್ ನಲ್ಲಿ ಭಾರತೀಯ ಬಿಲ್ಲುಗಾರ್ತಿ 10 ಅಂಕಗಳೊಂದಿಗೆ ಪ್ರಾರಂಭಿಸಿದ ನಂತರ 6 ಮತ್ತು 9 ರನ್ ಗಳಿಸಿದರು.  ಅಂತಿಮ ಎರಡನೇ ಬಿಲ್ಲು 6, 7 ಮತ್ತು 8 ಗಳನ್ನು ಮುಟ್ಟಿದವು. ಹೀಗಾಗಿ ಹಿನ್ನಡೆ ಉಂಟಾಯಿತು.

ಪಂದ್ಯದ ಮೂರನೇ ಸೆಟ್​​ನಲ್ಲಿ  ದೀಪಿಕಾ 10,9,10 ಅಂಕಗಳನ್ನು ಗಳಿಸಿ 29-28 ಅಂತರದಲ್ಲಿ ಗೆಲುವು ಸಾಧಿಸಿದರು. ಮೂರು ಸೆಟ್ ಗಳ ನಂತರ ಪಂದ್ಯವನ್ನು 4-2 ರಿಂದ ಮುನ್ನಡೆಸಿದ ದೀಪಿಕಾ ನಾಲ್ಕನೇ ಸೆಟ್ ನಲ್ಲಿ ಮತ್ತೊಮ್ಮೆ ಎಡವಿದರು.

ಕೊರಿಯಾದ ಬಿಲ್ಲುಗಾರ್ತಿ 4ನೇ ಸೆಟ್ ಅನ್ನು 29-27ರಿಂದ ಗೆದ್ದು ಮುಂದುವರಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!