‘ಹರ್ ಘರ್ ತಿರಂಗ’ ಅಭಿಯಾನ: ರಾಷ್ಟ್ರಧ್ವಜದ ಜೊತೆ ಸೆಲ್ಫೀ ಕ್ಲಿಕ್ಕಿಸಿ ಅಪ್​ಲೋಡ್ ಮಾಡಿ ಎಂದ ಅಮಿತ್ ಶಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಹರ್ ಘರ್ ತಿರಂಗ’ ಅಭಿಯಾನದಲ್ಲಿ ಭಾಗವಹಿಸುವಂತೆ ಜನರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮನವಿ ಮಾಡಿದ್ದಾರೆ.

ಇದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಏಕತೆಯನ್ನು ಜಾಗೃತಗೊಳಿಸುವ ರಾಷ್ಟ್ರೀಯ ಆಂದೋಲನವಾಗಿ ವಿಕಸನಗೊಂಡಿದೆ . ಈ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಎಲ್ಲರೂ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು. ಅದರ ಜೊತೆ ಸೆಲ್ಫೀ ತೆಗೆದುಕೊಂಡು ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

ನಾಗರಿಕರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು, ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳಬೇಕು ಆ ಚಿತ್ರವನ್ನು ‘ಹರ್ ಘರ್ ತಿರಂಗ’ ವೆಬ್‌ಸೈಟ್‌ನಲ್ಲಿ (hargartiranga.com) ಅಪ್‌ಲೋಡ್ ಮಾಡಬೇಕು ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಹರ್ ಘರ್ ತಿರಂಗಾ (#HarGharTiranga) ಅಭಿಯಾನವು ಕಳೆದ ಎರಡು ವರ್ಷಗಳಲ್ಲಿ ರಾಷ್ಟ್ರೀಯ ಆಂದೋಲನವಾಗಿ ವಿಕಸನಗೊಂಡಿದ್ದು, ರಾಷ್ಟ್ರದ ಉದ್ದಗಲಕ್ಕೂ ಇರುವ ಪ್ರತಿಯೊಬ್ಬ ಭಾರತೀಯನಲ್ಲೂ ಮೂಲಭೂತ ಏಕತೆಯನ್ನು ಜಾಗೃತಗೊಳಿಸಿದೆ. ಈ ಆಂದೋಲನವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಮತ್ತೆ ಅದೇ ಉತ್ಸಾಹದಿಂದ ಭಾಗವಹಿಸಲು ನಾನು ಎಲ್ಲಾ ನಾಗರಿಕರಲ್ಲಿ ಮನವಿ ಮಾಡುತ್ತೇನೆ ಎಂದು ಅವರು ವಿನಂತಿಸಿದ್ದಾರೆ.”

https://x.com/AmitShah/status/1819629684386419021?ref_src=twsrc%5Etfw%7Ctwcamp%5Etweetembed%7Ctwterm%5E1819629684386419021%7Ctwgr%5E97224aa8d91b340462edd330a423bc9022f2732d%7Ctwcon%5Es1_&ref_url=https%3A%2F%2Ftv9kannada.com%2Fnational%2Famit-shah-appeals-to-citizen-to-participate-har-ghar-tiranga-campaign-click-selfie-with-national-flag-sct-877463.html

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!