ಹೊಸದಿಗಂತ ಕಾರಟಗಿ:
ಪಿಎಸ್ಐ ಪರಶುರಾಮ ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಮಲಗಿದ್ದ. ಸಂಜೆ ವಸತಿ ಕೋಣೆಗೆ ಹೋಗಿ ಎಬ್ಬಿಸುವಾಗ ಹಾಸಿಗೆಯಲ್ಲೇ ಜೀವ ಹೋಗಿತ್ತು ಎಂದು ಪಿಎಸ್ಐ ಪರಶುರಾಮ ಅವರ ತಂದೆ ಜನಕಮುನಿ ತಿಳಿಸಿದರು.
ಸೋಮನಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ಮಧ್ಯಾಹ್ನ 3 ಗಂಟೆಗೆ ಮನೆಗೆ ಬಂದು ಊಟ ಮಾಡಿದರು. ಮನೆಯಲ್ಲಿ ನಾನು ಮತ್ತು ಪರಧುರಾಮ ಮಾತ್ರ ಇದ್ದೆವು. ಪರಶುರಾಮ ಖಿನ್ನತೆಗೆ ಒಳಗಾದಂತೆ ಕಾಣುತ್ತಿದ್ದ. ಊಟ ಮಾಡಿ ವಸತಿ ಕೋಣೆಗೆ ಹೋಗಿ ಮಲಗಿದ್ದನು. ಸಂಜೆ ಎಬ್ಬಿಸಲು ಹೋದಾಗ ಮೈ ಕೈ ತಣ್ಣಗಾಗಿತ್ತು. ಮೂಗಿನಿಂದ ರಕ್ತ ಬಂದಿತ್ತು ಎಂದು ವಿಶ್ಲೇಷಿಸಿದರು.