ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಹುಲ್ ಗಾಂಧಿ ಅವರನ್ನು ಬಂಧಿಸಿದರೆ ಬಿಜೆಪಿಯು ಶವಪೆಟ್ಟಿಗೆ ಸೇರುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಎಚ್ಚರಿಸಿದ್ದಾರೆ.
ನನ್ನನ್ನು ಬಂಧಿಸಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಸಜ್ಜಾಗಿ ನಿಂತಿದ್ದಾರೆ ಎಂಬುದಾಗಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ. ಸಂಸತ್‌ನಲ್ಲಿ ಮಾಡಿದ ಚಕ್ರವ್ಯೂಹದ ಹೇಳಿಕೆಯ ಬಳಿಕ ನನ್ನನ್ನು ಬಂಧಿಸಲು ಸಿದ್ಧತೆ ನಡೆಸಿದೆ ಎಂಬುದಾಗಿ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದರು. ಇದಕ್ಕೆ ಸಿಂಘ್ವಿ ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಗಾಂಧಿ ಅವರನ್ನು ಇ.ಡಿ ಬಂಧಿಸುವುದು ಬಿಡಿ, ಬಂಧಿಸುವ ಕುರಿತು ಯೋಚನೆ ಮಾಡಿದರೂ ದೇಶದ ಜನ ಬಿಜೆಪಿಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯಲಿದ್ದಾರೆ. ರಾಹುಲ್ ಗಾಂಧಿ ಅವರನ್ನು ಬಂಧಿಸುವ ಕುರಿತು ಯೋಚನೆಯನ್ನೂ ಮಾಡದಿರಿ. ಎಂದಿಗೂ ಯೋಚನೆ ಮಾಡದಿರಿ ಎಂದು ಎಚ್ಚರಿಸಿದರು.
ನಾನು ಸಂಸತ್‌ನಲ್ಲಿ ಚಕ್ರವ್ಯೂಹದ ಕುರಿತು ಭಾಷಣ ಮಾಡಿದ ಬಳಿಕ ಇ.ಡಿ ನನ್ನನ್ನು ಬಂಧಿಸಲು ಸಿದ್ಧತೆ ನಡೆಸುತ್ತಿದೆ. ಇ.ಡಿಯ ಮೂಲಗಳೇ ಇದರ ಕುರಿತು ಮಾಹಿತಿ ನೀಡಿವೆ ಎಂದು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದರು.