ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ ಎಲ್ಲರಿಗೂ ಉಚಿತ ವೀಸಾ: US ಸ್ಟಾರ್ಟ್‌ ಅಪ್‌ ಸಿಇಒ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಭಾರತದ ಕ್ರೀಡಾಪಟು ನೀರಜ್ ಚೋಪ್ರಾ ಚಿನ್ನ ಗೆದ್ದರೆ ಎಲ್ಲರಿಗೂ ‘ಉಚಿತ ವೀಸಾ’ ಎಂದು US ಸ್ಟಾರ್ಟ್‌ ಅಪ್‌ ನ ಭಾರತೀಯ ಮೂಲದ ಸಿಇಒ ಹೇಳಿದ್ದಾರೆ.

ಭಾರತೀಯ ಮೂಲದ ಸಿಇಒ ಮತ್ತು ಯುಎಸ್ ಮೂಲದ ವೀಸಾ ಸ್ಟಾರ್ಟ್‌ಅಪ್ ಅಟ್ಲಿಸ್ ಸಂಸ್ಥಾಪಕ ಮೋಹಕ್ ನಹ್ತಾ ಅವರು ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತೀಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆದ್ದರೆ ಎಲ್ಲರಿಗೂ ಉಚಿತ ವೀಸಾಗಳನ್ನು ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಈ ಕುರಿತು ಲಿಂಕ್ಡ್‌ ಇನ್‌ ನಲ್ಲಿ ಪೋಸ್ಟ್ ಮಾಡಿದ ಅವರು, ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ ನಾನು ವೈಯಕ್ತಿಕವಾಗಿ ಎಲ್ಲರಿಗೂ ಉಚಿತ ವೀಸಾ ಕಳುಹಿಸುತ್ತೇನೆ. ಹೋಗೋಣ ಎಂದು ಅಹೇಳಿದ್ದು, ಈ ಕೊಡುಗೆಯು ಎಲ್ಲಾ ದೇಶಗಳನ್ನು ಒಳಗೊಳ್ಳುತ್ತದೆ, ಬಳಕೆದಾರರಿಗೆ ಯಾವುದೇ ವೆಚ್ಚವಿಲ್ಲದೆ ವೀಸಾಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ.ಉಚಿತ ವೀಸಾ ದಿನವು ಆಗಸ್ಟ್ 8 ರಂದು ಇದೆ. ವೀಸಾ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಮತ್ತು ಬಳಕೆದಾರರು ಯಾವುದೇ ದೇಶಕ್ಕೆ ಪ್ರಯಾಣಿಸಲು ಆಯ್ಕೆ ಮಾಡಬಹುದು. ಉಚಿತ ವೀಸಾ ಕ್ರೆಡಿಟ್‌ನೊಂದಿಗೆ ಖಾತೆಯನ್ನು ರಚಿಸಲು ಆಸಕ್ತ ವ್ಯಕ್ತಿಗಳು ತಮ್ಮ ಇಮೇಲ್ ಅನ್ನು ಕಾಮೆಂಟ್‌ಗಳ ವಿಭಾಗದಲ್ಲಿ ಬರೆಯಲು ಪ್ರೋತ್ಸಾಹಿಸಲಾಗಿದೆ.

ಈ ಗೆಸ್ಚರ್ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ. ಅನೇಕರು ಚೋಪ್ರಾಗೆ ಉತ್ಸಾಹ ಮತ್ತು ಪ್ರೋತ್ಸಾಹವನ್ನು ವ್ಯಕ್ತಪಡಿಸಿದರೆ, ಇತರರು ಕೊಡುಗೆಯ ಹಿಂದಿನ ಮಾರ್ಕೆಟಿಂಗ್ ತಂತ್ರವನ್ನು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!