ಹೊಸದಿಗಂತ ಡಿಜಿಟಲ್ ಡೆಸ್ಕ್;
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಡೆದ ಮಹಿಳೆಯರ 75 ಕೆ. ಜಿ ವಿಭಾಗದ ಸ್ಪರ್ಧೆಯಲ್ಲಿ ಲವ್ಲಿನಾ ಬೊರ್ಗೊಹೈನ್ ಚೀನಾದ ಲಿ ಕಿಯಾನ್ ವಿರುದ್ಧ ಅನುಭವಿಸಿದ್ದಾರೆ.
ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಬಾಕ್ಸರ್ಗಳ ಅಭಿಯಾನವು ಪದಕವಿಲ್ಲದೆ ಕೊನೆಗೊಂಡಿತು.
ಹಾಲಿ ವಿಶ್ವ ಚಾಂಪಿಯನ್ ಬೊರ್ಗೊಹೈನ್ 1-4 ಅಂತರದಿಂದ ಸೋತರು.
ಶನಿವಾರ ರಾತ್ರಿ ನಡೆದ ಪುರುಷರ 71 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ನಿಶಾಂತ್ ದೇವ್ ನಿರ್ಗಮಿಸಿದ ನಂತರ 26 ವರ್ಷದ ಲವ್ಲಿನಾ ಒಲಿಂಪಿಕ್ಸ್ನಲ್ಲಿ ಭಾರತದ ಬಾಕ್ಸಿಂಗ್ ಅಭಿಯಾನ ಕೊನೆಗೊಳಿಸಿದರು.
ನಾಲ್ಕು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಒಳಗೊಂಡ ಆರು ಬಲಿಷ್ಠ ಬಾಕ್ಸಿಂಗ್ ತಂಡವು ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿತ್ತು.